ಕಾಣಿಯೂರು ಗ್ರಾ.ಪಂ. ಪಿಡಿಒ ಗೆ ಜೀವ ಬೆದರಿಕೆ ➤ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಆ.25 ಕಾಣಿಯೂರು ಗ್ರಾ.ಪಂ ಅಭಿವೃಧ್ದಿ ಅಧಿಕಾರಿಗೆ ಜೀವ ಬೆದರಿಕೆ ಹಾಕಿದ ಹಿನ್ನೆಲೆ ವ್ಯಕ್ತಿಯ ವಿರುದ್ದ ಬೆಳ್ಳಾರೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.


ಪಿಡಿಒ ಜಯಪ್ರಕಾಶ್‌ ರವರಿಗೆ ಕಾಣಿಯೂರು ಗ್ರಾಮದ ನಾವೂರು ಎಂಬಲ್ಲಿನ ತೇಜಪ್ರಸಾದ್‌ ಎಂಬವರು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಪಿ.ಡಿ.ಒ ಬೆಳ್ಳಾರೆ ಠಾಣೆಗೆ ದೂರು ನೀಡಿದ್ದರು. ಜುಲೈ 22 ರಂದು ಕಾಣಿಯೂರು ಗ್ರಾ.ಪಂ ಆಡಳಿತಾಧಿಕಾರಿ ಡಾ.ಕೆ.ಎಂ. ಗುರುಮೂರ್ತಿ ಅವರ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿ ಮಾತನಾಡಿದ ವ್ಯಕ್ತಿಯ ವಾಯ್ಸ್‌ ರೆಕಾರ್ಡ್ ನ್ನು ಪಿಡಿಒ ಜಯಪ್ರಕಾಶ್ ಮೊಬೈಲ್‌ಗೆ ರವಾನಿಸಿದ್ದು, ರೆಕಾರ್ಡ್‌ನಲ್ಲಿ ಕೊಲೆ ಬೆದರಿಕೆ ಹಾಕಿರುವುದು ದೃಢವಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಬೆದರಿಕೆ ಹಾಕಿದ ವ್ಯಕ್ತಿಯ ವಿರುದ್ದ ಕ್ರಿಮಿನಲ್‌ ಮೊಕದ್ದಮೆ ಹೂಡಿ ಕರ್ತವ್ಯಕ್ಕೆ ರಕ್ಷಣೆ ಒದಗಿಸುವಂತೆ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

Also Read  ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಮೃತ್ಯು

error: Content is protected !!
Scroll to Top