ನೆಲ್ಯಾಡಿ: ಪಿಎಫ್ಐ ವತಿಯಿಂದ ರಕ್ತದಾನ ಶಿಬಿರ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಆ. 25. ಪಾಪ್ಯುಲರ್ ಫ್ರಂಟ್ ಬ್ಲಡ್ ಫೋರಮ್ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಆಶ್ರಯದಲ್ಲಿ ರಕ್ತದಾನ ಶಿಬಿರವು ಇಂದು ನೆಲ್ಯಾಡಿ ಡಿ.ಸಿ.ಸಿ ಬ್ಯಾಂಕ್ ಬಳಿಯ ಸಂತ ಮೇರಿ ಹಾಲ್‌ನಲ್ಲಿ ನಡೆಯಿತು.

ಪಾಪ್ಯುಲರ್ ಫ್ರಂಟ್ ಕಬಕ ವಲಯ ಅಧ್ಯಕ್ಷ ಉಸ್ಮಾನ್ ಎ.ಕೆ.ರವರು ಪ್ರಸ್ತುತ ಸಂದರ್ಭದಲ್ಲಿ ರಕ್ತದಾನದ ಮಹತ್ವ ಹಾಗೂ ಇಸ್ಲಾಮಿನಲ್ಲಿ ದಾನದ ಪ್ರತಿಫಲದ ಕುರಿತು ಮಾಹಿತಿ ನೀಡಿದರು. ಮುಖ್ಯ ಅತಿಥಿಯಾಗಿದ್ದ ನೆಲ್ಯಾಡಿ ಸರಕಾರಿ ಹಿ.ಪ್ರಾ.ಶಾಲಾ ಮುಖ್ಯ ಶಿಕ್ಷಕ ಆನಂದ ಅಜಿಲರವರು ಮಾತನಾಡಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯು ಜಾತಿ ಭೇದವಿಲ್ಲದೆ ರೋಗಿಗಳಿಗೆ ರಕ್ತವನ್ನು ಒದಗಿಸುತ್ತಿರುವುದು ಉತ್ತಮ ಕಾರ್ಯವಾಗಿದೆ. ಇದೇ ರೀತಿ ಮುಂದೆಯೂ ಸಮಾಜಮುಖಿ ಕೆಲಸಗಳನ್ನು ಮಾಡಲು ಭಗವಂತನು ದಯಪಾಲಿಸಲಿ ಎಂದು ಶುಭ ಹಾರೈಸಿದರು. ಇನ್ನೋರ್ವ ಅತಿಥಿ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯನಿರ್ವಾಹಕ ಪ್ರವೀಣ್‌ ಕುಮಾರ್‌ರವರು ಮಾತನಾಡಿ ರಕ್ತಕ್ಕೆ ಜಾತಿಯಿಲ್ಲ, ಧರ್ಮವಿಲ್ಲ, ಭಗವಂತ ಸೃಷ್ಟಿಸಿದ ಗ್ರೂಪ್ ಮಾತ್ರ ಇರುವುದು, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವು ಹಲವು ಬಾರಿ ಹಲವು ಪ್ರದೇಶಗಳಲ್ಲಿ ಇಂತಹ ಶಿಬಿರಗಳನ್ನು ನಡೆಸುವ ಮೂಲಕ ರೋಗಿಗಳ ಪ್ರಾಣ ಉಳಿಸುವ ಕಾರ್ಯದಲ್ಲಿ ಯಶಸ್ವಿಯಾಗಿದೆ. ಸಂಘಟನೆಯ ಈ ಕಾರ್ಯವು ಮೆಚ್ಚುವಂತದ್ದು ಎಂದು ಹೇಳಿದರು.

Also Read  ಮಾದಕ ವ್ಯಸನದ ವಿರುದ್ಧ ಜನ ಸಂಚಲನ ➤ಗೋಳಿತ್ತಡಿಯ ಎಸ್.ಕೆ.ಎಸ್.ಎಸ್.ಎಫ್ ವತಿಯಿಂದ

ಪಾಪ್ಯುಲರ್ ಫ್ರಂಟ್ ನೆಲ್ಯಾಡಿ ಡಿವಿಷನ್ ಅಧ್ಯಕ್ಷ ಸಿದ್ದೀಕ್ ಮಣ್ಣಗುಂಡಿ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಡಬ ತಾಲೂಕು ಕಾರ್ಯದರ್ಶಿ ರಫೀಕ್ ನೆಲ್ಯಾಡಿ, ನೆಲ್ಯಾಡಿ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಸೀಗಲ್‌ರವರು ಉಪಸ್ಥಿತರಿದ್ದರು. ನವಾಜ್ ಕೋಲ್ಪೆ ನಿರೂಪಿಸಿ, ಮರ್ಝೂಕ್ ಕೋಲ್ಪೆ ವಂದಿಸಿದರು.

Also Read  ತುಳು ಅಕಾಡೆಮಿಯಿಂದ ಸಿ.ಟಿ ರವಿಯವರಿಗೆ ಗೌರವಾರ್ಪಣೆ

error: Content is protected !!
Scroll to Top