ಕಡಬ: ಎಸ್ಡಿಪಿಐ ಪಕ್ಷದ ಸಿದ್ದಾಂತವನ್ನು ಒಪ್ಪಿಕೊಂಡ ಕಾರ್ಯಕರ್ತರಿಂದ ಪಕ್ಷಕ್ಕೆ ಸೇರ್ಪಡೆ

(ನ್ಯೂಸ್ ಕಡಬ) newskadaba.com ಕಡಬ, ಆ. 25. ಎಸ್‌ಡಿಪಿಐ ಕಡಬ ತಾಲೂಕು ಸಮಿತಿಗೆ ಒಳಪಟ್ಟ ಮರ್ದಾಳದಲ್ಲಿ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಎಸ್‌.ಡಿ.ಪಿ.ಐ ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿಕೊಂಡು ಹಲವಾರು ಕಾರ್ಯಕರ್ತರು ಪಕ್ಷದ ಧ್ವಜವನ್ನು ಸ್ವೀಕರಿಸುವ ಮೂಲಕ ಪಕ್ಷಕ್ಕೆ ಸೇರ್ಪಡೆಗೊಂಡರು.


ಕಾರ್ಯಕ್ರಮದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಡಬ ತಾಲೂಕು ಸಮಿತಿ ಅಧ್ಯಕ್ಷರಾದ ‘ರಮ್ಲ’ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಉಸ್ಮಾನ್ ಎ.ಕೆ.ರವರು ಪಕ್ಷ ಸಿದ್ದಾಂತದ ಬಗ್ಗೆ ಮತ್ತು ಅದರ ಅನಿವಾರ್ಯತೆಯ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ಎಸ್.ಡಿ.ಪಿ.ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸದಸ್ಯರಾದ ಆನಂದ್ ಮಿತ್ತಬೈಲು ಅತಿಥಿ ಭಾಷಣವನ್ನು ಮಾಡಿದರು. ಕಡಬ ತಾಲೂಕು ಕಾರ್ಯದರ್ಶಿ ರಫೀಕ್ ಬೈಲು, ಕಡಬ ತಾಲೂಕು ಸಮಿತಿ ಸದಸ್ಯ ಕಮರುದ್ದೀನ್ ಉಪಸ್ಥಿತರಿದ್ದರು. ಅಬ್ದುಲ್ ನಬಿ ಸ್ವಾಗತಿಸಿ ಹಾರಿಸ್ ಕಳಾರ ಧನ್ಯವಾದಗೈದರು.

Also Read  ಬೆಳ್ತಂಗಡಿ: ದನಗಳ್ಳರು ಎಂದು ಆರೋಪಿಸಿ ಅಮಾಯಕರ ಮೇಲೆ ಹಲ್ಲೆ ಪ್ರಕರಣ ➤ ಏಳು ಮಂದಿ ಆರೋಪಿಗಳ ಬಂಧನ

error: Content is protected !!
Scroll to Top