(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಆ. 25. ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಾರೆಂಕಿ ಮತ್ತು ಮಚ್ಚಿನ ಬ್ರಾಂಚ್ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಆಯುಷ್ಮಾನ್ ಆರೋಗ್ಯ ಕಾರ್ಡ್” ನೋಂದಣಿ ಅಭಿಯಾನ ಕಾರ್ಯಕ್ರಮವು ಬಂಗೇರಕಟ್ಟೆ ಮಸೀದಿ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಸ್ಥಳೀಯ ಮಸೀದಿ ಗುರುಗಳಾದ ಸುಲೈಮಾನ್ ಮುಸ್ಲಿಯಾರ್ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಸಮಿತಿ ಸದಸ್ಯ ಇಕ್ಬಾಲ್ ಬಂಗೇರಕಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ 300 ಕ್ಕಿಂತಲೂ ಹೆಚ್ಚು ಜನರು ಪ್ರಯೋಜನವನ್ನು ಪಡೆದುಕೊಂಡರು.
Also Read ರಾಜ್ಯವನ್ನು ತಲ್ಲಣಗೊಳಿಸಿದ್ದ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣಕ್ಕೆ ಒಂದು ವರ್ಷ ► ಇನ್ನೂ ಆರಂಭವಾಗದ ವಿಚಾರಣೆ
ಈ ಸಂದರ್ಭದಲ್ಲಿ SDPi ಪಾರೆಂಕಿ ಗ್ರಾಮ ಸಮಿತಿ ಅಧ್ಯಕ್ಷರಾದ ಇಕ್ಬಾಲ್ ಸಾಲ್ಮರ ಮತ್ತು SDPI ಮಚ್ಚಿನ ಬ್ರಾಂಚ್ ಅಧ್ಯಕ್ಷರಾದ ಕಾಸಿಂ ಬಳ್ಳಮಂಜ ಮತ್ತು PFI ಮಡಂತ್ಯಾರ್ ವಲಯ ಅಧ್ಯಕ್ಷರಾದ ಬಿ.ಎಮ್ ರಝಾಕ್, ಸ್ಥಳೀಯ ಬಂಗೇರಕಟ್ಟೆ ಮಸೀದಿ ಅಧ್ಯಕ್ಷರಾದ PK ಇಸ್ಮಾಯಿಲ್ ಮತ್ತು ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಹಾಗೂ SDPI ಗ್ರಾಮ ಸಮಿತಿ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪಾರೆಂಕಿ ಗ್ರಾಮ ಸಮಿತಿ ಸದಸ್ಯರಾದ ರಫೀಕ್ ಬಂಗೇರಕಟ್ಟೆ ನಿರೂಪಿಸಿದರು.