ಜನಸ್ಪಂದನಾ ಸಮಿತಿ ಸುರುಳಿ ವತಿಯಿಂದ ಆಯುಷ್ಮಾನ್ ಕಾರ್ಡ್ ಅಭಿಯಾನ

(ನ್ಯೂಸ್ ಕಡಬ) newskadaba.com ಆಲಂಕಾರು, ಆ. 24. ಜನ ಸ್ಪಂದನಾ ಸಮಿತಿ, ಸುರುಳಿ ಇದರ ವತಿಯಿಂದ ಆಯೋಜಿಸಿದ ಭಾರತ ಸರಕಾರದ ಆರೋಗ್ಯ ಇಲಾಖೆಯ ಉಚಿತ ಚಿಕಿತ್ಸೆಯ ಆಯುಷ್ಮಾನ್ ಕಾರ್ಡ್ ಅಭಿಯಾನ ಸುರುಳಿಯಲ್ಲಿ ನಡೆಯಿತು.

ಕಾರ್ಡ್ ಅಭಿಯಾನದಲ್ಲಿ ಸರ್ವ ಧರ್ಮ ಜಾತಿ, ಪಕ್ಷ ಪಂಗಡಗಳ ಸುಮಾರು 200 ರಷ್ಟು ಜನರು ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಂಡರು. ಅಬ್ದುಲ್ ರಝಾಖ್ ಲತೀಫಿ ಕುಂತೂರುರವರು ದುಆಃ ಹಾಗೂ ಪ್ರಾಸ್ತಾವಿಕ ಭಾಷಣ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ರಾಮೋಹನ್ ರೈ ಸುರುಳಿ ಶುಭಹಾರೈಸಿದರು.

ಪ್ರಸ್ತುತ ಕಾರ್ಯಕ್ರಮದಲ್ಲಿ ಬದ್ರಿಯಾ ಮಸೀದಿ ಸುರುಳಿ ಅಧ್ಯಕ್ಷ ಅಬ್ದುಲ್ ಲತೀಫ್ ಬರಮೇಲು, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಸುರುಳಿ, ಖುತುಬಿಯ್ಯತ್ ಕಮಿಟಿ ಅಧ್ಯಕ್ಷ ಇಸ್ಹಾಖ್ ಕಟ್ಟೆ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಸುರುಳಿ, ಸ್ವಲಾತ್ ಕಮಿಟಿ ಅಧ್ಯಕ್ಷ ಅಬ್ದುಲ್ ಜಲೀಲ್ ಕಟ್ಟೆ ಹಾಗೂ ಹಲವಾರು ಸಾರ್ವಜನಿಕರು ಉಪಸ್ಥಿತರಿದ್ದರು.

Also Read  OTS ಗಡುವು ಅಂತ್ಯ: BBMPಯಿಂದ ದಾಖಲೆಯ 4,284 ಕೋಟಿ ರೂ.ತೆರಿಗೆ ಸಂಗ್ರಹ

error: Content is protected !!
Scroll to Top