ಕಾಲುವೆ ಬಿದ್ದ ವೃದ್ದೆಯನ್ನ ರಕ್ಷಿಸಿದ ಯುವಕ ➤ ಯುವಕನ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ

(ನ್ಯೂಸ್ ಕಡಬ) newskadaba.com ಬಳ್ಳಾರಿ. ಆ,24:  ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ ವೃದ್ಧೆಯನ್ನು ಯುವಕನೊಬ್ಬ ತನ್ನ ಪ್ರಾಣದ ಹಂಗುತೊರೆದು ರಕ್ಷಿಸಿದ ಘಟನೆ ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದ ಆರ್​ಟಿಓ ಕಚೇರಿಯ ಮುಂಭಾಗದ ಹೆಚ್​ಎಲ್​ಸಿ ಕಾಲುವೆಯಲ್ಲಿ ನಡೆದಿದೆ.

 

 

ಅಜಯ್​ ಎಂಬ ಯುವಕ ಅಜ್ಜಿಯನ್ನು ರಕ್ಷಿಸಿದ್ದಾನೆ.ಕಾಲುವೆಗೆ ಇಳಿದು ಮುಖ ತೊಳೆಯಲು ಹೋದ 70 ವರ್ಷದ ವೃದ್ಧೆ ಕಾಲು ಜಾರಿ ನೀರಿನಲ್ಲಿ ಬಿದ್ದಿದ್ದು, ನೀರಿನಲ್ಲಿ ಮುಳುಗಿ ಸುಮಾರು 300 ಮೀಟರ್​ ದೂರ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದರು. ಅದನ್ನು ಕೆಲವು ಯುವಕರು ಗಮನಿಸಿದ್ದು, ಅದರಲ್ಲಿ ಅಜಯ್ ಎಂಬ ಯುವಕ ಕಾಲುವೆಗೆ ಜಿಗಿದು ವೃದ್ಧೆಯನ್ನು ರಕ್ಷಿಸಿದ್ದಾನೆ. ಯುವಕ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Also Read  ಸುಳ್ಯ: ಚಿಲ್ಲರೆ ಹಣ ನೀಡಲು ತಡಮಾಡಿದ ಕೆಎಸ್ಸಾರ್ಟಿಸಿ ಬಸ್ ಕಂಡಕ್ಟರ್..! ➤ ಪ್ರಯಾಣಿಕನಿಂದ ಹಲ್ಲೆ

 

 

error: Content is protected !!
Scroll to Top