ಸಾಮಾಜಿಕ ಜಾಲತಾಣದಲ್ಲಿ ಮಾನಸಿ ಸುಧೀರ್ ಹವಾ ➤ ಗಣೇಶನನ್ನು ಕನ್ನಡ ಸ್ವರಾಕ್ಷರಗಳಲ್ಲಿ ವರ್ಣಿಸಿದ ಕಲಾವಿದೆ

(ನ್ಯೂಸ್ ಕಡಬ) newskadaba.com ಉಡುಪಿ . ಆ,24:   ಕನ್ನಡ ವರ್ಣಮಾಲೆಯನ್ನು ಸೇರಿಸಿ ಗಣೇಶನ ಕುರಿತಾಗಿ ರಚಿಸಿರುವ ಗೀತೆಗೆ ಭಾವ ತುಂಬಿರುವ ಮಾನಸಿ ಸುಧೀರ್ ಅವರ ವಿಡಿಯೋ ವೈರಲ್‌ ಆಗಿದೆ. ಇವರು ಅಪ್ರತಿಮ ಭರತನಾಟ್ಯ ಕಲಾವಿದೆಯು ಹೌದು.  ಗಣೇಶ ಹಬ್ಬದ ಸಂಭ್ರಮದಲ್ಲಿ ಬಿಡುಗಡೆಯಾದ ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಫೇಸ್‌ಬುಕ್‌, ವಾಟ್ಸ್‌ ಆಯಪ್‌ಗಳಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ನಾಟಕೀಯ ಶೈಲಿಯ ಹಾಡುಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹವಾ ಸೃಷ್ಠಿಸಿರುವ ಕಲಾವಿದೆ, ಮಾನಸಿ ಸುಧೀರ್.

 

ಕಥನ ಶೈಲಿಯ ಈ ಹಾಡು ಈಗ ಸಖತ್ ವೈರಲ್ ಆಗಿದೆ. ಕನ್ನಡ ವರ್ಣಮಾಲೆಯ ಸ್ವರಾಕ್ಷರಗಳನ್ನು ಇಟ್ಟುಕೊಂಡು ಗಣೇಶ ಹಬ್ಬದ ಸಂಭ್ರಮವನ್ನು ವಿವರಿಸಲಾಗಿದೆ.ಹಾಡು ಬಿಡುಗಡೆಯಾದ  ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರ ಮನಸ್ಸನ್ನೂ ಗೆದ್ದಿದೆ. ದಿವಂಗತ ಮುಂಡಾಜೆ ರಾಮಚಂದ್ರ ಭಟ್ ಅವರು ಆರೇಳು ದಶಕಗಳ ಹಿಂದೆ ಬರೆದ ಈ ಶಿಶುಗೀತೆ ಗೆ ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಮರುಜೀವ ಬಂದಿದೆ. ಹಬ್ಬದ ಖುಷಿಯ ಜೊತೆಗೆ ಕನ್ನಡ ಪ್ರೀತಿಯನ್ನು ಮಕ್ಕಳಿಗೆ ಪರಿಣಾಮಕಾರಿಯಾಗಿ ಹೇಳುವ ಈ ಹಾಡು ಅನೇಕರ ಮೆಚ್ಚುಗೆಗೂ ಪಾತ್ರವಾಗಿದೆ.

Also Read  ಕರಾವಳಿ ಜಿಲ್ಲೆಯಲ್ಲಿ ಕೊರೋನಾ ಮೂರನೇ ಅಲೆಯ ಭೀತಿ ಹಿನ್ನೆಲೆ ➤ ಜಿಲ್ಲಾಧಿಕಾರಿಯಿಂದ ಕೇರಳ ಗಡಿ ತಪಾಸಣೆ

 

error: Content is protected !!
Scroll to Top