ರಾತ್ರೋ ರಾತ್ರಿ ಚಿರತೆ ದಾಳಿ ➤ ಒಂದು ವರ್ಷ ಪ್ರಾಯದ ಕರುವೊಂದು ಬಲಿ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ. ಆ,23:  ಬೆಳ್ತಂಗಡಿಯ ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತೋಟತ್ತಾಡಿ ಗ್ರಾಮದ ಕಲ್ಲರಿಗೆ ಧರ್ಣಪ್ಪ ಗೌಡ ಎಂಬವರ ಒಂದು ವರ್ಷ ಪ್ರಾಯದ ಕರುವೊಂದು ಕಳೆದ ದಿನ ರಾತ್ರಿ ಚಿರತೆ ದಾಳಿಗೆ ತುತ್ತಾಗಿದೆ.

 


ದನದ ಕೊಟ್ಟಿಗೆಗೆ ಚಿರತೆ ದಾಳಿ ಮಾಡಿದ ಸಂದರ್ಭದಲ್ಲಿ ಜಾನುವಾರುಗಳು ಕೂಗಿಕೊಂಡಾಗ,  ಮನೆಮಂದಿ ಎಚ್ಚರಗೊಂಡು ಧಾವಿಸುವಷ್ಟರಲ್ಲಿ ಕರುವನ್ನು ಕೊಂದು ಹಾಕಿದ್ದ ಚಿರತೆ ಕಾಡಿನ ಕಡೆ ಓಡಿದೆ. ಈ ಪ್ರದೇಶದಲ್ಲಿ ದಾಸನ್,ಚೇತನ್,ಬಾಬು ಇವರ ಮನೆಗಳ ಸುತ್ತ-ಮುತ್ತ ಕಳೆದ ಕೆಲವು ದಿನಗಳಿಂದ ಹಲವಾರು ನಾಯಿಗಳು ಕೂಡ ಚಿರತೆ ದಾಳಿಗೆ ಬಲಿಯಾಗಿರುವ ಅವರು ತಿಳಿಸಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಗ್ರಾಮಸ್ಥರು ಚಿರತೆರಾಯನ ಹಾವಳಿಯಿಂದ ಆತಂಕಕ್ಕೆ ಒಳಗಾಗಿದ್ದಾರೆ.

Also Read  ಬೆಂಗಳೂರಿನ ವಿದ್ಯಾರ್ಥಿಗಳಿಂದ ಸೈಕಲ್ ನಲ್ಲಿ ಕಾರ್ಗಿಲ್ ಯಾತ್ರೆ.!

 

error: Content is protected !!
Scroll to Top