ಬೆಳ್ತಂಗಡಿ: ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಯಾಕೂಬ್ ಸರ್ ಅವರಿಗೆ ಕ್ಯಾಂಪಸ್ ಫ್ರಂಟ್ ವತಿಯಿಂದ ಸನ್ಮಾನ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಆ. 22, ತಾಲೂಕಿನ ನಡ ಪ್ರೌಢಶಾಲೆಯ ಗಣಿತ ಪ್ರಯೋಗಾಲಯದ ರೂವಾರಿಯಾದ ಯಾಕೂಬ್ ಸರ್, 2018 ರಲ್ಲಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿದ್ದರು. ಇದೀಗ ಬೆಳ್ತಂಗಡಿ ತಾಲೂಕನ್ನು ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರಮಟ್ಟಕ್ಕೆ ಪರಿಚಯಿಸಿ ‘ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅವರಿಗೆ ಕ್ಯಾಂಪಸ್ ಫ್ರಂಟ್ ಬೆಳ್ತಂಗಡಿ ಜಿಲ್ಲಾ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಬೆಳ್ತಂಗಡಿ ಜಿಲ್ಲಾ ಅಧ್ಯಕ್ಷರು ಸಫ್ವಾನ್ ಸುನ್ನತ್ ಕೆರೆ, ಬೆಳ್ತಂಗಡಿ ಜಿಲ್ಲಾ ಕಾರ್ಯದರ್ಶಿ ಯಾಸೀನ್ ಬಂಗೇರಕಟ್ಟೆ ಮತ್ತು ಜಿಲ್ಲಾ ಸಮಿತಿ ಸದಸ್ಯರಾದ ಉಸ್ಮಾನ್ ಬಂಗೇರಕಟ್ಟೆ ಮತ್ತು ಝಾಹೀದ್ ಸುನ್ನತ್ ಕೆರೆ ಉಪಸ್ಥಿತರಿದ್ದರು.

Also Read  ಕಡಬ ಸೇರಿದಂತೆ 49 ಹೊಸ ತಾಲೂಕುಗಳು ಜನವರಿ 01 ರಿಂದ ಅಸ್ತಿತ್ವಕ್ಕೆ ► ಕಂದಾಯ ಸಚಿವ ಕಾಗೋಡು ತಿಮ್ಮಪ್ಪ

error: Content is protected !!
Scroll to Top