ಬೆತ್ತೋಡಿಯಲ್ಲಿ ಆಯುಷ್ಮಾನ್ ಹೆಲ್ತ್‍ಕಾರ್ಡ್ ಅಭಿಯಾನ

(ನ್ಯೂಸ್ ಕಡಬ) newskadaba.com.ಕಡಬ, ಆ.21: ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಗ್ರಾಮಸ್ಥರಿಗೆಲ್ಲರಿಗೂ ಆಯುಷ್ಮಾನ್ ಹೆಲ್ತ್‍ಕಾರ್ಡ್ ಒದಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಐತ್ತೂರು ಇದರ ವತಿಯಿಂದ ಆ20ರಂದು ಬೆತ್ತೋಡಿ ಸಿ.ಆರ್.ಸಿ ಕಾಲೋನಿ ಬಳಿ ಆಯುಷ್ಮಾನ್ ಹೆಲ್ತ್‍ಕಾರ್ಡ್ ಅಭಿಯಾನ ನಡೆಯಿತು.

ಗ್ರಾಮ ಪಂಚಾಯತ್ ಐತ್ತೂರು ಮತ್ತು ಡಿಜಿಟಲ್ ಸೇವಾ ಸಿಂಧು ಕಡಬ ಇದರ ಸಂಯುಕ್ತ ಆಶ್ರಯದಲ್ಲಿ  ನಡೆದ ಅಭಿಯಾನವನ್ನು  ತಮ್ಮಯ್ಯ ಗೌಡ ಸುಳ್ಯ ಉದ್ಘಾಟಿಸಿದರು. ಬೆಳಗ್ಗೆಯಿಂದ ಸಂಜೆಯ ವರೆಗೆ ಮಾಸ್ಕ್ ಮತ್ತು ಸಮಾಜಿಕ ಅಂತರ ಕಾಯ್ದುಕೊಂಡು 270 ಮಂದಿ ಗ್ರಾಮಸ್ಥರು ಆಗಮಿಸಿ ಹೆಲ್ತ್‍ಕಾರ್ಡ್ ಪಡೆದುಕೊಂಡರೂ.

Also Read  ಕಡಬ , ಪುತ್ತೂರಿನಲ್ಲಿ ಇಂದು 40 ಮಂದಿಗೆ ಕೊರೋನ ದೃಢ

ಅಭಿಯಾನದಲ್ಲಿ ಐತ್ತೂರು ಗ್ರಾಮ ಪಂಚಾಯತ್‍ನ ಮಾಜಿ ಅಧ್ಯಕ್ಷ  ಸತೀಶ್ ಕೆ ಕೊಡೆಂಕಿರಿ, ಸುಳ್ಯ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ  ಹರೀಶ್ ಕಾಡುಮನೆ, ಶ್ರೀಧರ  ಗೌಡ ಸುಳ್ಯ, ಸುಬ್ರಹ್ಮಣ್ಯ ಬೆತ್ತೋಡಿ, ಶಿವರಾಜ್ ಬೆತ್ತೋಡಿ,  ರೋಹಿತ್ ಸುಳ್ಯ ಇತರರು ಅಭಿಯಾನದಲ್ಲಿ ಜೊತೆಗಿದ್ದರೂ.

error: Content is protected !!
Scroll to Top