ಬಿಳಿನೆಲೆ ಗೋಪಾಲಕೃಷ್ಣ ಪ್ರೌಢ ಶಾಲೆಯಲ್ಲಿ SSLC ವಿದ್ಯಾರ್ಥಿಗಳ ಸಾಧನೆ ➤ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಅಭಿನಂದಿಸಿದ ವಿದ್ಯಾಪ್ರಸನ್ನ ತೀರ್ಥರು

(ನ್ಯೂಸ್ ಕಡಬ) newskadaba.com ಕಡಬ. ಆ,21:  2019-20 ಸಾಲಿನ ಎಸ್.ಎಸ್.ಎಲ್ .ಸಿ ಪರೀಕ್ಷೆ ಯಲ್ಲಿ ಉತ್ತಮ ಸಾಧನೆ ಮಾಡಿದ ಶ್ರೀ ಸುಬ್ರಹ್ಮಣ್ಯ ಮಠದ ಆಡಳಿತ ಕೊಳಪಟ್ಟ , ಬಿಳಿನೆಲೆ ಶ್ರೀಗೋಪಾಲಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳನ್ನು ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀ ಪಾದಂಗಳವರು ಗುರುವಾರದಂದು  ಶ್ರೀ ಮಠದಲ್ಲಿ ಸನ್ಮಾನಿಸಿದರು.

ಊರ್ವಿ ಜಿ. ರವರು 625ಕ್ಕೆ 618 ಅಂಕ ಗಳಿಸಿ ಶ್ರೀ ಗೋಪಾಲ ಕೃಷ್ಣ ಪ್ರೌಢ ಶಾಲೆಗೆ ಪ್ರಥಮ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದರು. ಧನ್ಯ ಎನ್. ಎಚ್ ರವರು 625ಕ್ಕೆ 567 ಅಂಕ ಗಳಿಸಿದ್ದಾರೆ. ಸಿಂಚನ ಎನ್ ರವರು 625ಕ್ಕೆ 542 ಅಂಕ ಪಡೆದಿದ್ದಾರೆ.ಪ್ರಮೀಳಾ ರವರು 625ಕ್ಕೆ 537 ಅಂಕ ಗಳಿಸಿದ್ದಾರೆ.  ಹಾಗೂ ಲತಾ ಜಿ. ಒ ರವರು 625 ಕ್ಕೆ 535 ಅಂಕ ಗಳಿಸಿ ಶ್ರೀ ಗೋಪಾಲ ಕೃಷ್ಣ ಪ್ರೌಢ ಶಾಲೆಗೆ ಹೆಚ್ಚಿನ ಗರಿಮೆಯನ್ನು ತಂದಿದ್ದಾರೆ. ಶಾಲೆಯ ಶಿಕ್ಷಕ ವೃಂದ ಹಾಗೂ ಸಾಧನೆಗೈದ ವಿದ್ಯಾರ್ಥಿಗಳ ಪೋಷಕರ ಸಮ್ಮುಖದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

Also Read  ಉಡುಪಿ ಜುಲೈ 31ರ ತನಕ ಭಕ್ತರಿಗೆ ಶ್ರೀ ಕೃಷ್ಣನ ದರ್ಶನ ಭಾಗ್ಯವಿಲ್ಲ

 

 

error: Content is protected !!
Scroll to Top