ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಗ್ರೀ ನಂತರ ಕೆಲಸ ಇಲ್ಲದೆ ಅಲೆದಾಡುತ್ತಿದ್ದೀರಾ?* *➤ ಭವಿಷ್ಯದ ಕನಸನ್ನು ಕಟ್ಟಲು ಉಜ್ವಲ ಅವಕಾಶಗಳ ಬಗ್ಗೆ ಮಾಹಿತಿ ಇಲ್ಲಿದೆ

(ನ್ಯೂಸ್ ಕಡಬ) newskadaba.com ಉದ್ಯೋಗ ಮಾಹಿತಿ: ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಗ್ರಿ ಸ್ನಾತಕೋತ್ತರ ಪದವಿ ನಂತರ ಮುಂದೇನು ಮಾಡಬೇಕೆಂದು ಯೋಚಿಸುತ್ತಿರುವಿರಾ? ನಿಮ್ಮ ಭವಿಷ್ಯದ ಕನಸ್ಸನ್ನು ಕಟ್ಟಲು ಉಜ್ವಲ ಅವಕಾಶಗಳ ಬಗ್ಗೆ ಮಾರ್ಗದರ್ಶನ ನೀಡಲು ಸಿಧ್ದವಾಗಿದೆ. ಕರ್ನಾಟಕ ಸ್ಟುಡೆಂಟ್ಸ್‌ ವೆಲ್ ಫೇರ್ ಸೊಸೈಟಿ (ರಿ)

ಬೆಂಗಳೂರಿನಲ್ಲಿ ಕೇಂದ್ರ ಕಛೇರಿಯನ್ನು ಹೊಂದಿರುವ ಸಂಸ್ಥೆಯು ಇದೀಗ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹಾಗೂ ಎರಡು ವರ್ಷಗಳಿಂದ ಕಡಬ ತಾಲೂಕಿನಲ್ಲಿಯೂ ತನ್ನ ಸೇವೆಯನ್ನು ವೃದ್ಧಿಸಿದೆ. ಸರ್ಕಾರಿ/ಮ್ಯಾನೆಜ್ ಮೆಂಟ್ ಕಾಲೇಜುಗಳಲ್ಲಿ ಲಭ್ಯವಿರುವ ವಿವಿಧ ಶುಲ್ಕ ವಿನಾಯಿತಿ, ಹಾಗೂ ಬಡ ಮಕ್ಕಳಿಗೆ ಕಡಿಮೆ ವೆಚ್ಚದಲ್ಲಿ ತಮ್ಮ ಮುಂದಿನ ಉನ್ನತ ವಿಧ್ಯಾಭ್ಯಾಸವನ್ನು ರೂಪಿಸಿಕೊಳ್ಳಲು ಈ ಸಂಸ್ಥೆಯು ಉತ್ತಮ ಅವಕಾಶವನ್ನು ಒದಗಿಸುತ್ತಿದೆ. ಪ್ರಸ್ತುತ ಬೇಡಿಕೆಯುಳ್ಳ ಕೋರ್ಸ್ ಗಳ ಬಗ್ಗೆ ಮಾಹಿತಿ, ಸರ್ಕಾರಿ / ಮ್ಯಾನೇಜ್‍ಮೆಂಟ್ ಕಾಲೇಜುಗಳಲ್ಲಿ ಲಭ್ಯವಿರುವ ವಿವಿಧ ಶುಲ್ಕ ವಿನಾಯಿತಿ / ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ, ಪ್ರಸ್ತುತ ಬೇಡಿಕೆಯುಳ್ಳ ಕೋರ್ಸ್‍ಗಳ ಬಗ್ಗೆ ಮಾಹಿತಿ, ಭವಿಷ್ಯದ ಕನಸನ್ನು ಕಟ್ಟಲು ಉಜ್ವಲ ಅವಕಾಶಗಳ ಬಗ್ಗೆ ಮಾರ್ಗದರ್ಶನದ ಜೊತೆಗೆ ಉದ್ಯೋಗದ ಹುಡುಕಾಟ ಸೇರಿದಂತೆ ಕಳೆದ ಹಲವಾರು ವರ್ಷಗಳಿಂದ ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾರ್ಹತೆಗೆ ಸಂಬಂಧಪಟ್ಟಂತೆ, ಉತ್ತಮ ಕೋರ್ಸುಗಳ ಬಗ್ಗೆ, ವಿದ್ಯಾರ್ಥಿವೇತನ, ಸರಕಾರಿ ಸೌಲಭ್ಯ ಹಾಗೂ ಬೇಡಿಕೆಯುಳ್ಳ ಉದ್ಯೋಗದ ಮಾಹಿತಿ, ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ.

Also Read  ಬೆಳ್ತಂಗಡಿ : ಲಾಕ್‌ಡೌನ್‌ನಲ್ಲಿ ಕನ್ನಡ ಕಲಿತ ಫ್ರೆಂಚ್ ಪ್ರಜೆ

ಸಂಸ್ಥೆಯ ಮಾಹಿತಿ ಹಾಗೂ ಮಾರ್ಗದರ್ಶನದಿಂದ ಇಂದು ಅನೇಕ ವಿದ್ಯಾರ್ಥಿಗಳು ಬೇಡಿಕೆಯುಳ್ಳ ಕೋರ್ಸುಗಳನ್ನು ಹಾಗೂ ಉದ್ಯೋಗವಕಾಶವನ್ನು ಪಡೆದು, ದೇಶ ವಿದೇಶಗಳಲ್ಲಿ ತಮ್ಮ ಜೀವನದ ಯಶಸ್ಸನ್ನು ಕಂಡಿದ್ದಾರೆ. ವಿದ್ಯಾರ್ಥಿಗಳಿಗೆ ಬರುವ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿದ್ಯಾರ್ಥಿ ವೇತನದ ಬಗ್ಗೆ, ಹಾಸ್ಟೆಲ್ ಸೌಲಭ್ಯ ಹಾಗೂ ವಿವಿಧ ಸರ್ಕಾರಿ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಾದ ಎನ್.ಇ.ಇ.ಟಿ(ಓಇಇಖಿ), ಸಿ.ಇ.ಟಿ.(ಅಇಖಿ), ಹಾಗೂ ಕೆ.ಇ.ಎ.(ಏಂಇ) ಇನ್ನಿತರ ಪರೀಕ್ಷೆಗಳ ನೋಂದಾವಣೆಯ ಮಾಹಿತಿ ಹಾಗೂ ಮಾರ್ಗದರ್ಶನವನ್ನು ನೀಡಲಾಗುತ್ತದೆ.

Also Read  ➤ ಸ್ಯಾಂಡಲ್ ವುಡ್ ನ ಖ್ಯಾತ ನಟ ಲಕ್ಷ್ಮಣ್ ಹೃದಯಾಘಾತದಿಂದ ನಿಧನ!

ಅಲ್ಲದೇ ಬಹು ಬೇಡಿಕೆಯುಳ್ಳ ಉದ್ಯೋಗದ ಪೂರಕ ಮಾಹಿತಿಯನ್ನು ನೀಡಲಾಗುತ್ತದೆ. ಹಾಗಾದರೆ ನೀವು ಮಾಡಬೇಕಾದುದು ಇಷ್ಟೇ. ನಿಮ್ಮ ಉತ್ತಮ ಭವಿಷ್ಯಕ್ಕಾಗಿ ಈಗಲೇ ಸಂಪರ್ಕಿಸಿ: ಕರ್ನಾಟಕ ಸ್ಟುಡೆಂಟ್ಸ್ ವೆಲ್‍ಫೇರ್ ಸೊಸೈಟಿ (ರಿ.) ಶಿವಗಣೇಶ್ ಕಾಂಪ್ಲೆಕ್ಸ್, ಮುಖ್ಯ ರಸ್ತೆ ಕಡಬ ಮೊಬೈಲ್: 9945085102

error: Content is protected !!
Scroll to Top