(ನ್ಯೂಸ್ ಕಡಬ) newskadaba.com ಮಂಗಳೂರು. ಆ,20: ಮಳೆಯ ಅವಾಂತರಕ್ಕೆ ಈಗಾಗಲೇ ಕರಾವಳಿ ನುಗಿದೆ. ಕಳೆದ ದಿನ ಸುರಿದ ಭಾರಿ ಗಾಳಿ ಮಳೆಗೆ ಮಂಗಳೂರಿನ ಕೊಣಾಜೆ ಗ್ರಾಮದ ನರೇಕಳ ಎಂಬಲ್ಲಿ ಇಂದು ಮುಂಜಾನೆ 6 ಗಂಟೆಗೆ ಮನೆಯೊಂದು ಕುಸಿದು ತೀವ್ರ ಮಟ್ಟದ ಹಾನಿಯಾಗಿದೆ.
ಕೊಣಾಜೆ ಗ್ರಾಮದ ನರೇಕಳ ಎಂಬಲ್ಲಿ ಇಂದು ಮುಂಜಾಣೆ ಮಳೆರಾಯನ ಅವಾಂತರಕ್ಕೆ ಮನೆಯೊಂದು ನೆಲಕಚ್ಚಿದೆ. ನರೇಕಳದ ಕೊರಗಪ್ಪ ಮೂಲ್ಯ ಎಂಬುವರ ಮನೆಯ ಮೇಲ್ಛಾವಣಿ ಏಕಾಏಕಿಯಾಗಿ ಕುಸಿದು ಬಿದ್ದಿದೆ. ಈ ಘಟನೆ ನಡೆದ ವೇಳೆ ಮನೆಯಲ್ಲಿ ಎಂಟು ಮಂದಿ ಇದ್ದು, ತಕ್ಷಣವೇ ಮನೆಯಿಂದ ಹೊರಗೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ದೇವಕಿ ಎಂಬ ಮಹಿಳೆಯ ಕಾಲಿಗೆ ಸ್ವಲ್ಪ ಗಾಯಾವಾಗಿದೆ ಎಂದು ತಿಳಿದು ಬಂದಿದೆ. ಮನೆಯ ಛಾವಣಿ ಕುಸಿದಿದ್ದು, ಮನೆಯೊಳಗಿದ್ದ ವಸ್ತುಗಳಿಗೂ ಗಾನಿ ಯಾಗಿದ್ದು ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಇನ್ನು ಘಟನಾ ಸ್ಥಳಕ್ಕೆ ಗ್ರಾಮಕರಣಿಕ ಪ್ರಸಾದ್ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒಟ್ಟಾರೆಯಾಗಿ ಮಳೆರಾಯ ಒಂದಲ್ಲಾ ಒಂದು ಅವಾಂತರವನ್ನು ಸೃಷ್ಟಿಸುತ್ತಲೇ ಇದ್ದಾನೆ.