ಎಡಮಂಗಲ : ಗ್ರಾ.ಪಂ. ವ್ಯಾಪ್ತಿಗೆ ಎಣ್ಮೂರು ಗ್ರಾಮ ಅಧಿಕೃತವಾಗಿ ಸೇರ್ಪಡೆ

(ನ್ಯೂಸ್‌ಕಡಬ) newskadaba.com ಎಣ್ಮೂರು, ಆ 20: ಎಣ್ಮೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಎಣ್ಮೂರು ಗ್ರಾಮ ಮತ್ತು ಮುರುಳ್ಯ ಗ್ರಾಮಗಳು ಸೇರಿದ್ದು, ಆದರೆ ಎಣ್ಮೂರು ಎಡಮಂಗಲ ಗ್ರಾಮ ಪಂಚಾಯತ್ ಭಾಗವಾಗಲಿದೆ ಎಂದರು.

ಕಳೆದ ದಿನ ಸುಳ್ಯ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಭವನಿಶಂಕರ್ ಅವರು ತಾಲೂಕು ಪಂಚಾಯತ್ ನ ಸಹಾಯಕ ಲೆಕ್ಕಾಧಿಕಾರಿ ಹರೀಶ್ ರಾವ್ ಅವರೊಂದಿಗೆ ಎಣ್ಮೂರು ಗ್ರಾಮ ಪಂಚಾಯತ್ ಕಛೇರಿಗೆ ತೆರಳಿ ಅದೇ ಗ್ರಾಮಕ್ಕೆ ಸಂಬಂಧಪಟ್ಟ ಅಧಿಕೃತ ಕಡತ ಮತ್ತು ವಹಿಗಳನ್ನು ಎಡಮಂಗಲ ಗ್ರಾಮ ಪಂಚಾಯತ್ ಗೆ ಹಸ್ತಾಂತರಿಸಿದ್ದರು.ಗ್ರಾಮದ ಎಲ್ಲಾ ವ್ಯವಹಾರಗಳಿಗೆ ಇನ್ನು ಮುಂದಕ್ಕೆ ಎಡಮಂಗಲ ಗ್ರಾಮ ಪಂಚಾಯತ್‍ನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ. ಮುರುಳ್ಯ ಗ್ರಾಮ ಪಂಚಾಯಿತಿಯು ಮುಂದಿನ ಆದೇಶದವರಗೂ ಹಳೇಯ ಎಣ್ಮೂರು ಗ್ರಾಮ ಪಂಚಾಯತ್‍ನ ಕಟ್ಟಡದಲ್ಲಿಯೇ ಕಾರ್ಯನಿರ್ವಹಿಸುತ್ತದೆ ಎಂದು ಇ.ಒ ತಿಳಿಸಿದ್ದಾರೆ.

Also Read  ಬಿ.ಸಿ.ರೋಡ್: ನಿಲ್ಲಿಸಿದ್ದ ಬಸ್‌ಗಳಿಗೆ ಢಿಕ್ಕಿ ಹೊಡೆದ ಟಿಪ್ಪರ್ ► ನಾಲ್ಕು ಬಸ್ಸುಗಳಿಗೆ ಹಾನಿ

error: Content is protected !!
Scroll to Top