ಕಡಬ: ಕೊಯಿಲ ಜನತೆಯ ಬಹುಕಾಲದ ಕನಸು ನನಸು ಮಾಡಿದ ಏರ್ ಟೆಲ್

(ನ್ಯೂಸ್ ಕಡಬ) newskadaba.com ಕಡಬ, ಆ. 19, ತಾಲೂಕಿನ ಕೊಯಿಲ ಗ್ರಾಮದ ಆತೂರು, ಸಂಪ್ಯಡಿ ಭಾಗದ ಜನತೆ ಹಲವಾರು ವರ್ಷಗಳಿಂದ ನೆಟ್ ವರ್ಕ್ ಸಮಸ್ಯೆಯನ್ನು ಎದುರಿಸುತ್ತಲೇ ಬಂದಿದ್ದಾರೆ. ಸರಿಯಾಗಿ ಯಾವುದೇ ಸಿಮ್ ನೆಟ್ ವರ್ಕ್ ಕೂಡಾ ಸಿಗದೇ ಇರುವುದರಿಂದ ಹಲವಾರು ಕಡೆ ಟೆಲಿಕಾಂ ಅಧಿಕಾರಿಗಳನ್ನೂ, ಸ್ಥಳೀಯ ಶಾಸಕರನ್ನೂ ಭೇಟಿ ಮಾಡಿ ಮನವಿ ಮಾಡಿದ್ದರು. ಆದರೆ ಯಾವುದೇ ರೀತಿಯ ಧನಾತ್ಮಕ ಸ್ಪಂದನೆ ದೊರೆತಿರಲಿಲ್ಲ.

ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಇದ್ದ ಸಮಯದಲ್ಲಿ ದೂರವಾಣಿ ಕರೆ ಮಾಡಲು ಸರಿಯಾಗಿ ನೆಟ್ ವರ್ಕ್ ಸಿಗದೇ ಅಗತ್ಯ ಸಮಯದಲ್ಲಿ ಜನರನ್ನು ಸಂಪರ್ಕಿಸುವುದು ಕಷ್ಟಕರವಾಗಿತ್ತು. ಇನ್ನು ಶಾಲಾ ಮಕ್ಕಳಿಗೆ ಆನ್ ಲೈನ್ ತರಗತಿಗಳು ಪ್ರಾರಂಭವಾದಾಗ ಸರಿಯಾದ ಇಂಟೆರ್ ನೆಟ್ ಸೌಲಭ್ಯಕ್ಕಾಗಿ ಮಕ್ಕಳು ಮನೆಯ ಸಮೀಪದ ಗುಡ್ಡೆಗಳನ್ನು ಹತ್ತಿ ಸುಸ್ತಾದದ್ದೇ ಬಂತು. 4ಜಿ ಯುಗದಲ್ಲಿ ಸರಿಯಾದ ಇಂಟರ್ ನೆಟ್ ಅನ್ನೇ ನೋಡಲಾಗದ ಪರಿಸ್ಥಿತಿ ಈ ಪರಿಸರದವರದ್ದು.

Also Read  ರಾಜ್ಯಾದ್ಯಂತ ಮುಂದಿನ 3 ದಿನ ಗುಡುಗು ಸಹಿತ ಮಳೆ ಸಾಧ್ಯತೆ

ಜನಪ್ರತಿನಿಧಿಗಳಿಗೆ ಮತ್ತು ಟೆಲಿಕಾಂ ಸಂಸ್ಥೆಗಳಿಗೆ ಹಲವು ಬಾರಿ ನೆಟ್ ವರ್ಕ್ ಸಮಸ್ಯೆಯ ಕುರಿತು ದೂರು ನೀಡಿ ರೋಸಿ ಹೋಗಿದ್ದ ಈ ಭಾಗದ ಜನರಿಗೆ ಇದೀಗ ಸಿಹಿ ಸುದ್ದಿ ಎಂಬಂತೆ ಸಂಪ್ಯಾಡಿ ಎಂಬಲ್ಲಿ ಏರ್ಟೆಲ್ ಟವರ್ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಶೀಘ್ರದಲ್ಲೇ ಟವರ್ ನಿರ್ಮಾಣ ಕಾರ್ಯ ಪೂರ್ತಿಯಾಗಲಿದ್ದು, ನಂತರ ಯಾವುದೇ ರೀತಿಯ ನೆಟ್ವರ್ಕ್ ಸಮಸ್ಯೆ ಇರುವುದಿಲ್ಲ ಎಂದು ಏರ್ಟೆಲ್ ಸಂಸ್ಥೆಯ ಮನೋಜ್ ಎಂಬವರು ಭರವಸೆ ನೀಡಿದ್ದಾರೆ.

Also Read  ಎಸ್ವೈಎಸ್ ಮಾಣಿ ಸೆಂಟರ್ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆ

 

error: Content is protected !!
Scroll to Top