ಆನೆ ದಂತ ಹಾಗೂ ಜಿಂಕೆ ಕೊಂಬು ಸಾಗಾಟ ಬೇಧಿಸಿದಪೊಲೀಸರು -ಐವರ ಬಂಧನ

(ನ್ಯೂಸ್‌ ಕಡಬ) ಮೈಸೂರು ಆ,೧೯. ಜಿಂಕೆ ಕೊಂಬು ಹಾಗೂ ಆನೆ ದಂತಗಳನ್ನು ಬೈಕಿನಲ್ಲಿ ಕೊಂಡೊಯ್ಯುತ್ತಿದ್ದ ಐವರನ್ನು ಅರಣ್ಯ ಸಂಚಾರ ದಳದ ಸಿಬ್ಬಂದಿಗಳು ಬಂಧಿಸಿದ್ದಾರೆ.

ಆರೋಪಿಗಳನ್ನು ಮೈಸೂರಿನ ಗಾಯತ್ರಿಪುರಂ ನಿವಾಸಿ ಅಬ್ದುಲ್ ರಜಾಕ್, ತಿಲಕನಗರ ನಿವಾಸಿ ನಟರಾಜ್, ಅಗ್ರಹಾರ ನಿವಾಸಿ ರವಿಕುಮಾರ್, ಮೇಟಗಳ್ಳಿಯ ಗೌತಮ್ ಹಾಗೂ ಬೆಂಗಳೂರು ಚಂದ್ರ ಲೇಔಟ್ ನ ವಿನೋದ್ ಎಂದು ಗುರುತಿಸಲಾಗಿದೆ. ಬುಧವಾರ ಸಂಜೆ ಮೈಸೂರಿನ ಅಬ್ದುಲ್ ಕಲಾಂ ನಗರ ಸಮೀಪದ ರಿಂಗ್ ರೋಡ್ ಬಳಿ ಎರಡು ದ್ವಿಚಕ್ರ ವಾಹನಗಳಲ್ಲಿ ಆನೆ ದಂತ ಮತ್ತು ಜಿಂಕೆ ಕೊಂಬು ಸಾಗಾಟ ಮಾಡುತ್ತಿರುವ ಬಗೆಗಿನ ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಅರಣ್ಯ ಸಂಚಾರದಳ ಸಿಬ್ಬಂದಿಗಳು ಐವರನ್ನು ಬಂಧಿಸಿ, ದಂತ, ಜಿಂಕೆ ಕೊಂಬು ಹಾಗೂ ಎರಡು ಸ್ಕೂಟರ್ ಗಳನ್ನು ವಶಪಡಿಸಿಕೊಂಡಿದ್ದಾರೆ.

Also Read  ಸುರತ್ಕಲ್: ಬಲೆಗೆ ಸಿಲುಕಿ ಸಮುದ್ರದಲ್ಲಿ ಮುಳುಗಿ ಮೀನುಗಾರ ಮೃತ್ಯು

error: Content is protected !!
Scroll to Top