ಬೆಂಗಳೂರು ಗಲಭೆ: ಹೈಕೋರ್ಟ್ ಮೆಟ್ಟಿಲೇರಿದ ಸರ್ಕಾರ. ಆ 20 ರಂದು ಅರ್ಜಿಯ ವಿಚಾರಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, . 19: ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿಯಲ್ಲಿ ನಡೆದ ಗಲಭೆಯಲ್ಲಿ ನಡೆದ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿ ಪಾಸ್ತಿ ಹಾನಿಗೆ ಸಂಬಂಧಿಸಿ ಆಗಿರುವ ಹಾನಿಯನ್ನು ನಿರ್ಣಯಿಸಲು ಆಯುಕ್ತರನ್ನು ನೇಮಕ ಮಾಡುವ ಕುರಿತಂತೆ ರಾಜ್ಯ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿದೆ. ಆ.20 ರಂದು ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಯಲಿದೆ.

 

ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟ್ಯಾಂತರ ರೂ. ಖಾಸಗಿ ಮತ್ತು ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟ ಉಂಟಾಗಿದ್ದು, ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಗಲಭೆಕೋರ ಆರೋಪಿಗಳಿಂದಲೇ ನಷ್ಟದ ವಸೂಲಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸೋಮವಾರ ತಿಳಿಸಿದ್ದರು ಹಾಗೆಯೇ ರಾಜ್ಯ ಸರ್ಕಾರಕ್ಕೆ ಗಲಭೆಯಿಂದ ಉಂಟಾಗಿರುವ ನಷ್ಟದ ಮೊತ್ತ ನಿರ್ಣಯಿಸಲು ಆಯುಕ್ತರನ್ನು ನೇಮಕ ಮಾಡುವಂತೆ ಹೈಕೋರ್ಟ್‌ಗೆ ಮನವಿ ಸಲ್ಲಿಸಿದೆ.ಸರ್ಕಾರ ಸಲ್ಲಿಸಿರುವ ಈ ಅರ್ಜಿಯ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್ ಓಕಾ ಅವರು ಗುರುವಾರ ನಡೆಸಲಿದ್ದಾರೆ.

Also Read  ಕಿಚ್ಚನ ಪ್ರಚಾರದ ವಿರುದ್ಧ ಟೀಕಿಸಿ ಮಾತಡಿದ ಮಾಜಿ ಶಾಸಕರ ಪುತ್ರ ➤ ರೊಚ್ಚಿಗೆದ್ದ ಸುದೀಪ್ ಫ್ಯಾನ್ಸ್  

error: Content is protected !!
Scroll to Top