ಚಿಕ್ಕೋಡಿ: ಭಾರಿ ಮಳೆಯಿಂದಾಗಿ ಓರ್ವ ವ್ಯಕ್ತಿ ಮೃತ್ಯು

(ನ್ಯೂಸ್‌ಕಡಬ) newskadaba.com ಚಿಕ್ಕೋಡಿ , ಆ 18: ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮನೆಯ ಗೋಡೆಯೊಂದು ಕುಸಿದು ಬಿದ್ದಿದ್ದು, ಓರ್ವ ವ್ಯಕ್ತಿ ಮೃತಪಟ್ಟ ಘಟನೆ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟನದಲ್ಲಿ ನಡೆದಿದೆ. ಮೃತಪಟ್ಟವರನ್ನ ಕಲ್ಲಪ್ಪ ಪರಗೌಡ (70) ಎಂದು ಗುರುತಿಸಲಾಗಿದೆ.

ಮಳೆಯ ಕಾರಣದಿಂದಾಗಿ ಮನೆಯ ಗೋಡೆಗಳು ಶಿಥಿಲಗೊಂಡು ಕುಸಿದುಬಿದ್ದಿದೆ. ಪರಿಣಾಮ ಕಲ್ಲಪ್ಪ ಪರಗೌಡರು ಮೃತಪಟ್ಟಿದ್ದಾರೆ. ಘಟನೆ ಸ್ಥಳಕ್ಕೆ ತಹಶಿಲ್ದಾರ್ ಸುಭಾಷ ಸಂಪಗಾವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೀಗ ಮಹಾ ಮಳೆ ಅಬ್ಬರ ತಗ್ಗಿದ್ದು, ಹೀಗಾಗಿ ಕೃಷ್ಣಾ ಮತ್ತು ಉಪನದಿಗಳ ನೀರಿನ ಮಟ್ಟದಲ್ಲಿ ಒಂದು ಅಡಿಯಷ್ಟು ಹೆಚ್ಚಳವಾಗಿದೆ. ಹಾಗೆಯೇ ಚಿಕ್ಕೋಡಿ ಉಪವಿಭಾಗದಲ್ಲಿ ಎಂಟು ಸೇತುವೆಗಳು ಜಲಾವೃತಗೊಂಡಿವೆ. ಯಡೂರವಾಡಿ ತೋಟಪಟ್ಟಿ ಪ್ರದೇಶದ 100 ಕ್ಕೂ ಅಧಿಕ ಕುಟುಂಬಗಳು ಸುರಕ್ಷಿತವಾದ ಸ್ಥಳಕ್ಕೆ ತೆರಳಿದ್ದಾರೆ.

Also Read  ಪಾವಗಡದ ಸೋಲಾರ್ ಪಾರ್ಕನ್ನು ಕಂಡು ಮೋದಿಗೆ ಗಾಬರಿಯಾಗಿದೆ ► ಪ್ರಧಾನಿಯ ಕಾಳೆಲೆದ ಇಂಧನ ಸಚಿವ ಡಿ.ಕೆ.ಶಿವಕುಮಾರ್

error: Content is protected !!
Scroll to Top