ಬ್ರಹ್ಮಾವರ : ಶಿಕ್ಷಕರಿಂದ ವಿದ್ಯಾರ್ಥಿಗಳ ಮನೆ ಭೇಟಿ, ಮಕ್ಕಳ ಅಭ್ಯಾಸದ ಕುರಿತು ಪರಿಶೀಲನೆ

(ನ್ಯೂಸ್ ಕಡಬ) newskadaba.com ಬ್ರಹ್ಮಾವರ. ಆ,19:  ಕೊರೋನಾ ವೈರಸ್ , ಹಿನ್ನೆಲೆ ಶಾಲಾ ಶಿಕ್ಷಣ ಹೊಸರೂಪ ಪಡೆಯುವಂತೆ ಆಗಿದೆ. ಟಿವಿಯಲ್ಲಿ ಮತ್ತು ವಿದ್ಯುನ್ಮಾನದ ಮೂಲಕ ಶಿಕ್ಷಣ ನೀಡುವ ಸರ್ಕಾರಿ ಆದೇಶಕ್ಕೆ ಸರ್ಕಾರದಿಂದ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಸರಿಯಾಗಿ ಸ್ಪಂದಿಸುತ್ತಾರಾ ಎನ್ನುವುದನ್ನು ಪ್ರತಿಯೊಂದು ಪ್ರದೇಶದಲ್ಲಿ ಶಾಲಾ ಶಿಕ್ಷಕರು ತೆರಳಿ ಪರಿಶೀಲಿಸುವ ಕ್ರಮ ಬ್ರಹ್ಮಾವರ ಸರ್ಕಾರಿ ಪದವಿ ಪೂರ್ವ ಕಾಲೇಜಿನಿಂದ ನಡೆಯುತ್ತಿದೆ.

 

8ರಿಂದ 1ನೇ ತರಗತಿಯಲ್ಲಿ 900 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಎ.ಬಿ.ಸಿ.ಡಿ.ಇ ತನಕ ತರಗತಿ ನಡೆಯುತ್ತಿದ್ದು 26 ಕಾಯಂ ಶಿಕ್ಷಕರು ಶಿಕ್ಷಣ ನೀಡುತ್ತಿದ್ದು, ಇಲ್ಲಿಗೆ 25 ಕಿ.ಮೀ. ದೂರದಿಂದ ಬರುವ ವಿದ್ಯಾರ್ಥಿಗಳೂ ಇದ್ದಾರೆ. ಬಾರಕೂರು, ಕೊಕ್ಕರ್ಣೆ, ಆವರ್ಸೆ, ಸಂತೆಕಟ್ಟೆ, ಕುಂದಾಪುರ ಸಾಸ್ತಾನ ಭಾಗದ ಕೆಲವು ಕಡೆಯಲ್ಲಿ ಪ್ರತೀ ದಿನ ಒಂದೊಂದು ಭಾಗದಲ್ಲಿ ಶಿಕ್ಷಕರು ಭಾಗವಹಿಸುತ್ತಾರೆ.ಮನೆಯಲ್ಲಿ ಸಾಮಾಜಿಕ ಜಾಲತಾಣದಿಂದ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಸರಿಯಾಗಿ ಗ್ರಹಿಸಿದ್ದಾರಾ ಅಥವಾ ತರಗತಿಯಲ್ಲಿ ತಿಳಿಯದಿರುವುದನ್ನು ಅವರಿಗೆ ತಿಳಿಸಲು ಅವರು ವಾಸಿಸುವ ಮನೆಗಳಿಗೆ ಅಥವಾ ಹತ್ತಾರು ವಿದ್ಯಾರ್ಥಿಗಳು ಒಂದೆಡೆ ಸೇರಲು ಅವಕಾಶ ಇದ್ದಲ್ಲಿ ಕ್ಷಿಷ್ಟವಾದ ವಿಷಯವನ್ನು ಮನವರಿಕೆ ಮಾಡುವುದಕ್ಕಾಗಿ 68 ಕಡೆಯಲ್ಲಿ ತರಗತಿ ಮಾಡಲಾಗುತ್ತಿದೆ.

Also Read  ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವತಿಯಿಂದ ➤ ಶ್ರೀ ಕೃಷ್ಣ ಜನ್ಮೋತ್ಸವ ಸ್ಪರ್ಧೆಗಳ ಉದ್ಘಾಟಣಾ ಸಮಾರಂಭ

 

 

“ಸರ್ಕಾರದಿಂದ ಹಲವಾರು ಸೌಲಭ್ಯ ಪಡೆದು ಶಿಕ್ಷಣ ಪಡೆಯಲು ನಮ್ಮ ವಿದ್ಯಾರ್ಥಿಗಳಿಗೆ ಕೊರೋನಾ ವೈರಸ್ ಹಿನ್ನಲೆಯಲ್ಲಿ ಸಮಯಕ್ಕೆ ಸರಿಯಾದ ಶಿಕ್ಷಣ ನೀಡುವ ಇನ್ನೊಂದು ಹೆಜ್ಜೆ ನಮ್ಮದು” ಎಂದು ಸರ್ಕಾರಿ ಪ್ರೌಢ ಶಾಲೆ ಬ್ರಹ್ಮಾವರದ ಉಪ ಪ್ರಾಂಶುಪಾಲರಾದ ಬಿ.ಟಿ ನಾಯ್ಕ ರವರು ತಿಳಿಸಿದ್ದಾರೆ.

Also Read  ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಫೂಜೆ ➤ ನಿರ್ಮಲಾನಂದನಾಥ ಸ್ವಾಮೀಜಿಗೆ ಆಹ್ವಾನ

 

error: Content is protected !!
Scroll to Top