ಕಡಬ ಮತ್ತು ಪುತ್ತೂರು ಉಭಯ ತಾಲೂಕಿನ ಕೊರೋನ ಅಪ್ ಡೇಟ್



(ನ್ಯೂಸ್ ಕಡಬ) newskadaba.com ಕಡಬ. ಆ,19: ಕಡಬ ಮತ್ತು ಪುತ್ತೂರು ಉಭಯ ತಾಲೂಕಿನ ಲ್ಲಿ ಇಂದು ( ಆ. 19) 17 ಮಂದಿಯಲ್ಲಿ ಕೊರೋನಾ ಸೊಂಕು ದೃಢ ಪಟ್ಟಿದೆ. ಕಡಬ ತಾಲೂಕಿನ ನೂಜಿ ಬಾಳ್ತಿಲ ನಿವಾಸಿ 70 ವರ್ಷದ ವ್ಯಕ್ತಿ, ಕಡಬ ನಿವಾಸಿಗಳಾದ 12 ವರ್ಷದ ಬಾಲಕಿ,  40 ವರ್ಷದ ವ್ಯಕ್ತಿಯಲ್ಲಿ ಕೊರೋನಾ ದೃಢಪಟ್ಟಿದೆ.





ಇನ್ನು, ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಭವಾನಿಶಂಕರ್ ರಸ್ತೆಯ ನಿವಾಸಿ 29 ವರ್ಷದ ಯುವಕ, ಮಲ್ಯ ಕಂಪೌಂಡ್ ನಿವಾಸಿ 77 ವರ್ಷದ ವೃದ್ದೆ, ಪಡೀಲ್ ನಿವಾಸಿ 33 ವರ್ಷದ ವ್ಯಕ್ತಿ, ದರ್ಬೆ ನಿವಾಸಿ 34 ವರ್ಷದ ವ್ಯಕ್ತಿ, ಬೀದಿ ಮಜಲು ನಿವಾಸಿ 35 ವರ್ಷದ ಮಹಿಳೆ, ಸಾಲ್ಮರ ನಿವಾಸಿ 35 ವರ್ಷದ ವ್ಯಕ್ತಿ, ಮಾಡ್ನೂರು ನಿವಾಸಿ 40 ವರ್ಷದ ಮಹಿಳೆ, 15 ವರ್ಷದ ಬಾಲಕ, ಕುರಿಯ ನಿವಾಸಿ 42 ವರ್ಷದ ವ್ಯಕ್ತಿಯಲ್ಲಿ, 37 ವರ್ಷದ ವ್ಯಕ್ತಿ, 10 ವರ್ಷದ ಬಾಲಕ, 34 ವರ್ಷದ ವ್ಯಕ್ತಿ, 34 ವರ್ಷದ ವ್ಯಕ್ತಿಯಲ್ಲಿ ಕೊರೋನಾ ದೃಢಪಟ್ಟಿದೆ.






error: Content is protected !!
Scroll to Top