ಆನ್​ಲೈನ್​ ಕ್ಲಾಸ್​ಗೆ ಮೊಬೈಲ್​ ಕೊಡದಕ್ಕೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಆತ್ಮಹತ್ಯೆ

(ನ್ಯೂಸ್‌ ಕಡಬ) ಚಾಮರಾಜನಗರ, ಆ ೧೮. ಆನ್ಲೈನ್‌ ಕ್ಲಾಸ್ಗೆ ಮೊಬೈಲ್​ ಕೊಡದ ಕಾರಣ ಬಾಲಕಿಯೋರ್ವಳು ಆತ್ಮಹತ್ಯೆಗೆ ಶರಣಾದ ಘಟನೆ ಚಾಮರಾಜನಗರ ತಾಲ್ಲೂಕಿನ ಸಾಗಡೆ ಗ್ರಾಮದಲ್ಲಿ ಇಂದು ನಡೆದಿದೆ.

ಮೃತ ಬಾಲಕಿಯನ್ನು ಹರ್ಷಿತಾ (15) ಎಂದು ಗುರುತಿಸಲಾಗಿದೆ. ಈಕೆ ಸಾಗಡೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಕೋವಿಡ್ ಹಿನ್ನೆಲೆಯಲ್ಲಿ ಶಾಲೆಗಳು ಮುಚ್ಚಿರುವುದರಿಂದ ಸರ್ಕಾರ ಆನ್​ಲೈನ್​ ಶಿಕ್ಷಣಕ್ಕೆ ಮೊರೆ ಹೋಗಿದೆ. ಹೀಗಾಗಿ ಮೊಬೈಲ್ ತೆಗೆದುಕೊಡುವಂತೆ ಪಾಲಕರನ್ನು ಹರ್ಷಿತಾ ಒತ್ತಾಯ ಮಾಡಿದ್ದಳು. ಹಣಬಂದ ಕೂಡಲೇ ಮೊಬೈಲ್ ಕೊಡಿಸುವುದಾಗಿ ಪಾಲಕರು ಹೇಳಿದ್ದರಾದರೂ, ಮನನೊಂದ ಬಾಲಕಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Also Read  ಅಪ್ಪಾಜಿ ಕ್ಯಾಂಟೀನ್, ಇಂದಿರಾ ಕ್ಯಾಂಟೀನ್ ಆಯ್ತು.. ಇದೀಗ ರಮ್ಯಾ ಕ್ಯಾಂಟೀನ್ ► ಅಲ್ಲಲ್ಲಿ ತಲೆಯೆತ್ತುತ್ತಿರುವ ಅಗ್ಗದ ಬೆಲೆಯ ಕ್ಯಾಂಟೀನ್ ಗಳು

error: Content is protected !!
Scroll to Top