ಮೂಡುಬಿದಿರೆ: ರಾಷ್ಟ್ರಮಟ್ಟದ ಕ್ರೀಡಾಪಟು ಹೃದಯಾಘಾತದಿಂದ ಮೃತ್ಯು

(ನ್ಯೂಸ್ ಕಡಬ) ಮೂಡುಬಿದಿರೆ, ಆ. 18. ಆಳ್ವಾಸ್ ಕಾಲೇಜಿನ ಹಳೇ ವಿದ್ಯಾರ್ಥಿ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಯನ್ನು ಮಾಡಿದ್ದ ಕ್ರೀಡಾಪಟು ಓರ್ವರು ಬಳ್ಳಾರಿಯ ತನ್ನ ಊರಿನಲ್ಲಿ ಹೃದಯಾಘಾತದಿಂದ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.

ಮೃತ ಯುವಕನನ್ನು ಮೊಯುದ್ದೀನ್ ಎಂದು ಹೆಸರಿಸಲಾಗಿದೆ. ಈತ ಆಳ್ವಾಸ್ ಪಿಯು ಕಾಲೇಜು ಹಾಗೂ ಆಳ್ವಾಸ್ ಪದವಿ ಕಾಲೇಜಿನ ಹಳೇ ವಿದ್ಯಾರ್ಥಿಯಾಗಿದ್ದ. ಕ್ರೀಡೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ದಾಖಲೆ ಮಾಡಿದ್ದರು. ಅಖಿಲ ಭಾರತ ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿ 100 ಮೀಟರ್ ಓಟದಲ್ಲಿ ಕೂಟ ದಾಖಲೆ ಮಾಡಿದ್ದಾರೆ. ಮೊಯುದ್ದೀನ್ ಅವರಿಗೆ ಐದು ವರ್ಷಗಳ ಹಿಂದೆ ವಿವಾಹವಾಗಿದ್ದು, ಚಿಕ್ಕ ಹೆಣ್ಣು ಮಗುವಿದೆ.

Also Read  ಅಕ್ರಮ ದನ ಸಾಗಾಟದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನ ➤ ಆರೋಪಿಯ ಬಂಧನ

error: Content is protected !!
Scroll to Top