ಕೊವಿಡ್ ನಂತರ ನಾಗರೀಕ ಸಮಾಜದ ಪಾತ್ರಹೆಚ್ಚಿದೆ -ಡಾ. ಹರೀಶ್ ರಾಮಸ್ವಾಮಿ

(ನ್ಯೂಸ್ ಕಡಬ) newskadaba.com ಕಡಬ, . 18. ಮಂಗಳೂರು, ಆ. ಉತ್ತಮ ನಾಗರೀಕ ಸಮಾಜ ಕೋವಿಡ್  ನಮ್ಮ ಬೆಳವಣಿಗೆಯಲ್ಲಿ ಮೂಲಭೂತ ಅವಶ್ಯಕತೆಯಾಗಿರಲಿದೆ, ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ರಾಜಕೀಯ ಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾದ್ಯಾಪಕ ಡಾ. ಹರೀಶ್ ರಾಮಸ್ವಾಮಿ ಅಭಿಪ್ರಾಯಪಟ್ಟರು.


ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ ರಾಜಕೀಯ ಶಾಸ್ತ್ರ, ಪತ್ರಿಕೋದ್ಯಮ, ಸಮಾಜಶಾಸ್ತ್ರ, ಐಕ್ಯೂ ಎ.ಸಿ ವಿಭಾಗಗಳು ಜಂಟಿಯಾಗಿ  ಆಯೋಜಿಸಿದ್ದ ನಾಗರೀಕ ಸಮಾಜ ಮತ್ತು ಸರಕಾರದ ನಡುವಿನ ನಂಟು ಎಂಬ ರಾಷ್ಟ್ರ ಮಟ್ಟದ ವೆಬಿನಾರ್‍ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ಜವಾಬ್ದಾರಿಯುತನ ನಾಗರೀಕ ಸಮಾಜ ಸರ್ಕಾರಕ್ಕೆ ತಲುಪಲಾಗದ ವಿಷಯಗಳನ್ನು ತಲುಪಬೇಕು. ಸಂಪನ್ಮೂಲದ ಸದ್ಭಳಕೆಗೆ ಸಹಾಯಕವಾಗಬೇಕು ಎಂದು ಹೇಳಿದರು. ಉದ್ಘಾಟನಾ ಭಾಷಣದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ . ಪಿ.ಸುಬ್ರಹ್ಮಣ್ಯ  ಯಡಪಡಿತ್ತಾಯ, ಇದು ಪ್ರಜಾಪ್ರಭುತ್ವದಲ್ಲಿ ನಮ್ಮ ಪಾತ್ರದ ಕುರಿತು ಯೋಚಿಸುವ ಸಮಯ ಎಂದರು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ರಾಜು ಮೊಗವೀರ, ಕಾಲೇಜಿನ ಪ್ರಾಂಶುಪಾಲ ಡಾ. ಉದಯ್ ಕುಮಾರ್ ಎಂ. ಎ, ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಲತಾ ಎ ಪಂಡಿತ್, ಪತ್ರಿಕೋದ್ಯಮದ ವಿಭಾಗದ ಮುಖ್ಯಸ್ಥೆ ಡಾ. ಶಾನಿ ಕೆ.ಆರ್, ಸಮಾಜಶಾಸ್ತ್ರ ವಿಭಾಗದ ಡಾ. ಗಾಯತ್ರಿ ಎನ್, ಐಕ್ಯೂ ಎ.ಸಿ ಸಂಯೋಜಕ ಡಾ. ವೀರಭದ್ರಪ್ಪ ಉಪಸ್ಥಿತರಿದ್ದರು. ದೇಶದ ವಿವಿದೆಡೆಯಿಂದ 300 ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.

Also Read  Board Management Software for Business

error: Content is protected !!
Scroll to Top