ಸರ್ಕಾರಿ ಕಾಲೇಜಿನ ಬಾವಿಗೆ ಅಳವಡಿಸಿದ್ದ ಪಂಪ್ ಸೆಟ್ ಕಳ್ಳತನ ➤ ಕಡಬ ಕಾಲೇಜಿನ ಮುಖ್ಯಸ್ಥರು ಕಡಬ ಠಾಣೆಯಲ್ಲಿ ದೂರು

(ನ್ಯೂಸ್ ಕಡಬ) newskadaba.com ಕಡಬ, ಆ,18:  ಸರ್ಕಾರಿ ಕಾಲೇಜಿನ ಬಾವಿಗೆ ಅಳವಡಿಸಿದ್ದ ಪಂಪ್ ಸೆಟ್ ನ್ನ ಖದೀಮರು ಕದ್ದಿರುವ ಘಟನೆಯೊಂದು ಕಡಬದಲ್ಲಿ ನಡೆದಿದೆ. ಈ ಬಗ್ಗೆ ಕಡಬ ಕಾಲೇಜಿನ ಮುಖ್ಯಸ್ಥರು ಕಡಬ ಠಾಣೆಯಲ್ಲಿ ದೂರು ನೀಡಿದ್ದಾರೆ.

 

ಕಾಲೇಜಿನಲ್ಲಿ ಸೋಮವಾರದಂದು ಟ್ಯಾಂಕ್ ಗೆ ನೀರು ತುಂಬಿಸಲು ಪಂಪ್ ಸ್ವಿಚ್ ಹಾಕಿದ್ದರು, ಚಾಲು ಆಗದಿರುವುದನ್ನು ಗಮನಿಸಿದ ಸಿಬ್ಬಂದಿ ಬಾವಿಯತ್ತ ತೆರಳಿ ಪರೀಕ್ಷಿಸಿದಾಗ ಪಂಪ್ ಸೆಟ್ಟ್ ಕಳವಾಗಿರುವುದು ಬೆಳಕಿಗೆ ಬಂದಿದೆ. ಕೊರೊನಾ ಹಿನ್ನಲೆಯಲ್ಲಿ ಇತ್ತೀಚೆಗೆ ಪಿಯುಸಿ ಆಂಗ್ಲ ಪರೀಕ್ಷೆ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆ ಸಂದರ್ಭದಲ್ಲಿ ಕುಡಿಯುವ ನೀರಿಗಾಗಿ ಸುಮಾರು 20 ಸಾವಿರ ವೆಚ್ಚದಲ್ಲಿ ಪಂಪ್ ಅಳವಡಿಸಲಾಗಿತ್ತು. ಕೊಳವೆ ಬಾವಿಯಲ್ಲಿ ನೀರು ಸಿಗದಿದ್ದ ಹಿನ್ನಲೆಯಲ್ಲಿ ಬಾವಿಯನ್ನ ಸ್ವಚ್ಛಗೊಳಿಸಿ ಪಂಪ್ ಅಳವಡಿಸಲಾಗಿತ್ತು. ಇದೀಗಾ ಇದನ್ನು ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ. ಸದ್ಯ ಕಾಲೇಜಿನ ಮುಖ್ಯಸ್ಥರು ನೀಡಿದ ದೂರಿನಂತೆ ಕಳ್ಳರ ಹುಡುಕಾಟಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Also Read  ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ

 

 

 

error: Content is protected !!
Scroll to Top