ಕ್ರೀಡಾ ತರಬೇತಿ ಕೇಂದ್ರ – ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 18. ಭಾರತ ಸರ್ಕಾರವು  ಖೇಲೋ ಇಂಡಿಯಾ ಯೋಜನೆಯಡಿ ಪರಿಣಾಮಕಾರಿಯಾದ ಕ್ರೀಡಾ ತರಬೇತಿ ವ್ಯವಸ್ಥೆಯನ್ನು ಸರಿಪಡಿಸಲು ಖೇಲೋ ಇಂಡಿಯಾ ಕೇಂದ್ರವನ್ನು ದೇಶಾದ್ಯಂತ ಪ್ರಾರಂಭಿಸಲು ಉದ್ದೇಶಿಸಿದೆ.

ಇದಕ್ಕಾಗಿ 14 ಕ್ರೀಡಾ ವಿಭಾಗಗಳನ್ನು (ಆರ್ಚರಿ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬಾಕ್ಸಿಂಗ್, ಸೈಕ್ಲಿಂಗ್, ಫೆನ್ಸಿಂಗ್, ಹಾಕಿ, ಜುಡೋ, ರೋವಿಂಗ್, ಶೂಟಿಂಗ್, ಈಜು, ಟೇಬಲ್ ಟೆನ್ನಿಸ್, ವೈಟ್‍ಲಿಫ್ಟಿಂಗ್, ಕುಸ್ತಿ) ಎಂದು ಗುರುತಿಸಲಾಗಿದೆ. ಖೇಲೋ ಇಂಡಿಯಾ ಕೇಂದ್ರಗಳಿಗೆ ಕೇಂದ್ರ ಸರಕಾರದಿಂದ ತರಬೇತುದಾರರ ಗೌರವಧನ, ಸಹಾಯಕ ಸಿಬ್ಬಂದಿ, ಕ್ರೀಡಾ ಉಪಕರಣಗಳು, ಕ್ರೀಡಾ ಕಿಟ್, ಕ್ರೀಡಾಕೂಟಗಳಲ್ಲಿ ಭಾಗವಹಿಸುವಿಕೆಗೆ ತಗಲುವ ವೆಚ್ಚದ ಅನುದಾನ ಬಿಡುಗಡೆ ಮಾಡಲಾಗುತ್ತದೆ.  ದಕ್ಷಿಣ ಕನ್ನಡ ಜಿಲ್ಲೆಯ ಆಸಕ್ತ ನೋಂದಾಯಿತ ಕ್ರೀಡಾ ಸಂಸ್ಥೆಗಳು/ ಶಿಕ್ಷಣ ಸಂಸ್ಥೆಗಳು ಹಾಗೂ ತರಬೇತು ನೀಡುತ್ತಿರುವ ಅಂತರಾಷ್ಟ್ರೀಯ ಕ್ರೀಡಾಪಟುಗಳು ಖೇಲೋ ಇಂಡಿಯಾ ತರಬೇತಿ ಕೇಂದ್ರ ಪ್ರಾರಂಭಿಸಲು ಇಚ್ಚಿಸಿದಲ್ಲಿ ಅಥವಾ ಈಗಾಗಲೇ ಕ್ರೀಡಾ ಸಂಸ್ಥೆಯನ್ನು ಹೊಂದಿದ್ದು, ಇದನ್ನು ಉನ್ನತೀಕರಿಸಲು ಇಚ್ಚಿಸಿದಲ್ಲಿ ಅಂತವರು  ಜಾಲತಾಣ https://nsrs.kheloindia.gov.in  ಮೂಲಕ ಆಗಸ್ಟ್ 31 ರೊಳಗೆ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಪ್ರದೀಪ್ ಡಿ’ಸೋಜ, ಉಪನಿರ್ದೇಶಕರು,  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳಾ ಕ್ರೀಡಾಂಗಣ, ದ. ಕ. ಜಿಲ್ಲೆ, ಮಂಗಳೂರು ದೂರವಾಣಿ ಸಂಖ್ಯೆ: 0824-2451264 ನ್ನು  ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Also Read  ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು ➤ ಪ್ರಯಾಣಿಕರು ಅಪಾಯದಿಂದ ಪಾರು

error: Content is protected !!
Scroll to Top