ಮಂಗಳೂರು: ಇ.ಎ. ಕಾಲೇಜಿನ ಪ್ರೊಫೆಸರ್ ಡಾ. ಅಬ್ದುಲ್ ರಹಿಮಾನ್ ನಿಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.17, ಬಾಕ್ರಬೈಲ್ ಸಮೀಪದ ತಲೆಕ್ಕಿ ನಿವಾಸಿ ಕೊಣಾಜೆಯ ಪಿ.ಎ ಕಾಲೇಜಿನ ಪ್ರೊಫೆಸರ್ ಡಾ. ಅಬ್ದುಲ್ ರಹ್ಮಾನ್ (61) ಸೋಮವಾರ ರಾತ್ರಿ‌ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ‌ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.

ವೃತ್ತಿಯಲ್ಲಿ ಉಪನ್ಯಾಸಕರಾಗಿದ್ದ ಇವರು ಪ್ರವೃತ್ತಿಯಲ್ಲಿ ಲೇಖಕ, ಭಾಷಣಕಾರ ಹಾಗೂ ಸಂಘಟಕರಾಗಿ‌ ಗುರುತಿಸಲ್ಪಟ್ಟಿದ್ದರು. ಇನೋಳಿಯ ಬಿಐಟಿ ಶಿಕ್ಷಣ ಸಂಸ್ಥೆಯಲ್ಲಿ ಉಪನ್ಯಾಸಕರಾಗಿದ್ದ ಇವರು ಯೇನೆಪೋಯ ವಿವಿಯಲ್ಲಿ ಅಸಿಸ್ಟೆಂಟ್ ರಿಜಿಸ್ಟ್ರಾರ್ ಆಗಿ ಕಾರ್ಯನಿರ್ವಹಿಸಿದ್ದರು.ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಆರು ಮಂದಿ ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಇಸ್ಲಾಮ್ ಆ್ಯಂಡ್ ಸೈನ್ಸ್‌ನ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದರು. ಅಲ್ಲದೇ ಕರ್ನಾಟಕದ ಮುಸ್ಲಿಂ ಜಮಾಅತ್‌‌ನ ಕಾರ್ಯದರ್ಶಿಯಾಗಿಯೂ ಸೇವೆಗೈದಿದ್ದರು. (ಮೃತರ ನಿಧನಕ್ಕೆ ಡಾ.ಎಮ್ಮೆಸ್ಸೆಮ್ ಝೈನಿ ಸಖಾಫಿ, ಕೆಎಂ ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಬಿಎಂ ಮುಮ್ತಾಝ್ ಅಲಿ ಸಂತಾಪ ಸೂಚಿಸಿದ್ದಾರೆ).

Also Read  ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದ ಹಿನ್ನೆಲೆ ➤ ಮೀನುಗಾರರು ಸಮುದ್ರ ತೀರಕ್ಕೆ ತೆರಳದಂತೆ ಹವಾಮಾನಾ ಇಲಾಖೆ ಮುನ್ಸೂಚನೆ

error: Content is protected !!
Scroll to Top