(ನ್ಯೂಸ್ ಕಡಬ) newskadaba.com ಮಂಗಳೂರು, ಆ. 17. ಶಕ್ತಿನಗರದ ಶಕ್ತಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಯಾಗಿದ್ದ ಬೈಕಾಡಿ ಜನಾರ್ದನ ಆಚಾರ್ಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತು. ಈ ಸಂದರ್ಭದಲ್ಲಿ ಬೀಳ್ಕೊಡುಗೆ ಎನ್ನುವುದು ಒಂದು ವೃತ್ತಿಯಿಂದ ಸಿಗುವ ತಾತ್ಕಾಲಿಕ ಬಿಡುಗಡೆ, ಆದರೆ ಅಧಿಕಾರಿಯಿಂದ ಸಂಸ್ಥೆಯು ಗಳಿಸಿದ ಅನುಭವ ಮಹತ್ವವಾದುದು ಎಂದು ಶಕ್ತಿನಗರದ ಶಕ್ತಿ ವಿದ್ಯಾ ಸಂಸ್ಥೆಯ ಬೈಕಾಡಿ ಜನಾರ್ದನ್ ಆಚಾರ್ ರವರ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿದ ಸಂಸ್ಥೆಯ ಕಾರ್ಯದರ್ಶಿಯಾದ ಸಂಜೀತ್ ಸಿ ನಾೈಕ್ ಹೇಳಿದರು. ಬೀಳ್ಕೊಡುಗೆ ಎನ್ನುವುದು ಕೇವಲ ಸಾಂಕೇತಿಕವಾಗಿದ್ದು ಅವರಿಂದ ಗಳಿಸಿದ ಜ್ಞಾನ ಅಪಾರವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದ ಸಮ್ಮಾನಿತರು ತನ್ನ ವೃತ್ತಿ ಜೀವನದ ಅನುಭವದಲ್ಲಿ ಶಕ್ತಿ ಶಿಕ್ಷಣ ಸಂಸ್ಥೆಯಿಂದ ಗಳಿಸಿದ ಪ್ರೀತಿ, ಅನುಭವ ಅಪಾರವಾದುದು. ಇದು ಕಲಿಕಾ ಕೇಂದ್ರದ ಜೊತೆಗೆ, ತಾನು ಇಲ್ಲಿಂದ ಕಲಿತ ವಿಚಾರಗಳು ಹತ್ತು ಹಲವಾರು. ಶಿಕ್ಷಕರು ತಮ್ಮ ವೃತ್ತಿಯನ್ನು ನಿಷ್ಟೆಯಿಂದ ಮಾಡುವ ರೀತಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವ ಪರಿಯನ್ನು ಕುರಿತು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಬೈಕಾಡಿ ಜನಾರ್ಧನ ಆಚಾರ್ರವರ ಜೊತೆಗೆ ರತ್ನಾವತಿ ಬೈಕಾಡಿಯವರಿಗೂ ಸನ್ಮಾನ ಮಾಡಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಶ್ರೀ ಗೋಪಾಲಕೃಷ್ಣ ಆಡಳಿತ ಮೊಕ್ತೇಸರರಾದ ಡಾ.ಕೆ.ಸಿ ನಾೈಕ್ ಮಾತನಾಡಿ ಶಕ್ತಿ ಶಿಕ್ಷಣ ಸಂಸ್ಥೆಯನ್ನು ಮುಂದೆ ತರುವಲ್ಲಿ ಬೈಕಾಡಿಜನಾರ್ದನ್ ಆಚಾರರ ಪಾತ್ರ ದೊಡ್ಡದು. ಇವರು ಅನೇಕ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಶಕ್ತಿ ಸಂಸ್ಥೆಗೆ ಶಕ್ತಿ ನೀಡಿದ್ದಾರೆಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ, ಶಿಕ್ಷಕಿ ಸ್ವಾತಿ ಭರತ್, ಪೂಣೇಶ್, ಪ್ರೀತಿಕೀಕಾನ್, ಗೋಪಾಲಕೃಷ್ಣ ಪ್ರಿ–ಸ್ಕೂಲ್ ಸಂಚಾಲಕಿ ನೀಮಾ ಸಕ್ಸೇನಾ ಮಾತನಾಡಿದರು. ಸನ್ಮಾನ ಪತ್ರವನ್ನು ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ವಿದ್ಯಾ ಜಿ. ಕಾಮತ್ ವಾಚಿಸಿದರು. ಶಿಕ್ಷಕಿ ದಿವ್ಯಜ್ಯೋತಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಸ್ವಾಗತವನ್ನು ಶಕ್ತಿ ಪ.ಪೂ. ಕಾಲೇಜಿನ ಪ್ರಾಂಶುಪಾಲರಾದ ಪ್ರಭಾಕರ ಜಿ.ಎಸ್ ಹಾಗೂ ವಂದಾನರ್ಪಣೆಯನ್ನು ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ ನೆರೆವೆರಿಸಿದರು. ಆಡಳಿತ ಮಂಡಳಿಯ ಸಗುಣ ಸಿ ನಾೈಕ್, ಅಂಜು ಆಳ್ವ ನಾೈಕ್, ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತಾಧಿಕಾರಿ ಕೃಷ್ಣಕುಮಾರ್ ಉಪಸ್ಥಿತರಿದ್ದರು.