ಪ್ರಥಮ ಪಿಯುಸಿ ದಾಖಲಾತಿ – ಆನ್ಲೈನ್ ಅಪ್ಲಿಕೇಷನ್

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 17. ಕೋವಿಡ್-19ರ ತುರ್ತು ಸಮಯದಲ್ಲಿ,  ಪ್ರಸ್ತುತ ಶೈಕ್ಷಣಿಕ ವರ್ಗದ ಪ್ರಥಮ ಪಿ.ಯು.ಸಿ ತರಗತಿಗಳಿಗೆ ಜಿಲ್ಲೆಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಲು ಪ್ರಾಯೋಗಿಕವಾಗಿ ಆನ್‍ಲೈನ್ ಅಪ್ಲಿಕೇಷನ್ ತಂತ್ರಾಂಶವನ್ನು ತಯಾರಿಸಲಾಗಿದೆ.

 

ಈ ಕಾಲೇಜುಗಳಿಗೆ ಪ್ರಥಮ ಪಿ.ಯು.ಸಿ ದಾಖಲಾತಿಗಾಗಿ ವಿಶ್ವದ ಯಾವುದೇ ಭಾಗದಿಂದ ವಿದ್ಯಾರ್ಥಿಗಳು ಆನ್‍ಲೈನ್ ಅಪ್ಲಿಕೇಷನ್ ಸಲ್ಲಿಸಬಹುದು. ವಿದ್ಯಾರ್ಥಿಗಳು ಆನ್‍ಲೈನ್ ಅಪ್ಲಿಕೇಷನ್  ಸಲ್ಲಿಸಲು   https://apply.dkpucpa.com  ಗೆ ಲಾಗಿನ್ ಆಗಿ ಆನ್‍ಲೈನ್ ಅಪ್ಲಿಕೇಷನ್  ಸೌಲಭ್ಯವನ್ನು ಹೊಂದಿರುವ ಕಾಲೇಜುಗಳ ವಿವರ ಹಾಗೂ ಸಹಾಯವಾಣಿ ಪಟ್ಟಿಯ ಲಿಂಕನ್ನು ವೀಕ್ಷಿಸಿ, ದಾಖಲಾತಿ ಬಯಸುವ ಯಾವುದೇ ಕಾಲೇಜಿನ ಸಹಾಯವಾಣಿಗೆ ಕರೆಮಾಡಿ ಅಪ್ಲಿಕೇಶನ್ ನಂಬರ್  ಮತ್ತು ಸೆಕ್ಯುರಿಟಿ ಕೋಡ್‍ನ್ನು ಪಡೆದುಕೊಂಡು, ದಾಖಲಾತಿ ಅರ್ಜಿಯನ್ನು ಸಲ್ಲಿಸಬಹುದು. ಆನ್‍ಲೈನ್ ಅಪ್ಲಿಕೇಷನ್ ಸಲ್ಲಿಸುವ  ಬಗೆಗಿನ ಎಲ್ಲಾ ವಿವರಗಳನ್ನು https://apply.dkpucpa.com ವೆಬ್‍ಸೈಟ್‍ನಲ್ಲಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9901431492 ಸಂಪರ್ಕಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಪ್ರಕಟಣೆ ತಿಳಿಸಿದೆ.

Also Read  ಪತ್ನಿಯೊಂದಿಗೆ ಬಂದು ಮತ ಚಲಾಯಿಸಿದ ಮಾಜಿ ಪ್ರಧಾನಿ..!➤ಎಚ್.ಡಿ.ದೇವೇಗೌಡ

error: Content is protected !!
Scroll to Top