ಅಡೆಕ್ಕಲ್ ಅಬ್ಬಾಸ್ ಹಾಜಿ ನಿಧನ ➤ ಎಸ್.ಡಿ.ಪಿ.ಐ ಸಂತಾಪ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ ಆ,17:  ಧಾರ್ಮಿಕ ಪಂಡಿತ ,ಸರಳ ಸಜ್ಜನ ವ್ಯಕ್ತಿತ್ವ ಹೊಂದಿದ್ದ ಶತಾಯುಷಿ ಅಡೆಕ್ಕಲ್ ಅಬ್ಬಾಸ್ ಹಾಜಿ (103 ವರ್ಷ) ಯವರು ಇಂದು ಬೆಳಗ್ಗೆ ಅಲ್ಲಾಹನ ಕರೆಗೆ ಓಗೊಟ್ಟು ನಮ್ಮನ್ನು ಅಗಲಿರುತ್ತಾರೆ. ಅಡೆಕ್ಕಲ್  ಮಸೀದಿಯ ಸ್ಥಾಪಕ ಸದಸ್ಯರು.

ಅಲ್ಲಿ ಬಹಳಷ್ಟು ಸಮಯದಿಂದ ಸೇವೆ ನೀಡಿದ ಅವರು ಎಲ್ಲರಿಗೂ ಚಿರಪರಿಚಿತರು ಮತ್ತು ಬಹುಮಾನ್ಯರಾಗಿದ್ದರು. ಕಾಸರಗೋಡಿನ ತಳಂಗರೆ ಹಾಗೂ ಹಾಸನ, ಚಿಕ್ಕಮಂಗಳೂರು ಜಿಲ್ಲೆಯ ಹಲವು ಸಮಸ್ತದ ಮಸೀದಿಗಳಲ್ಲಿ ಖತೀಬಾಗಿ,ಇಮಾಮಾಗಿ, ಮುದರ್ರಿಸ್ ಆಗಿ ಸೇವೆ ಸಲ್ಲಿಸಿರುತ್ತಾರೆ. ಅವರು ಆರು ಗಂಡು ಮತ್ತು ಮೂರು ಹೆಣ್ಣು ಮಕ್ಕಳನ್ನು ಹೊಂದಿದ್ದರು. ಹಲವು ಉಲಾಮಾ ಶಿಷ್ಯರನ್ನು ಹೊಂದಿದ್ದವರಾಗಿದ್ದಾರೆ. ಅಲ್ಲಾಹು ಅವರ ಪರಲೋಕ ಜೀವನ ಸುಖಮಯಗೊಳಿಸಲಿ. ನಮ್ಮೆಲ್ಲರನ್ನೂ ಅಲ್ಲಾಹನು ಸ್ವರ್ಗದಲ್ಲಿ ಒಂದುಗೂಡಿಸಲಿ.

Also Read  ವಿಟ್ಲ: ಮನೆಯಲ್ಲಿಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹೊತ್ತೊಯ್ದ ಕಳ್ಳರು

error: Content is protected !!
Scroll to Top