ಪುತ್ತೂರು: ಬೈಕ್ ಸೀಟ್ ಕೆಳಗೆ ಸುತ್ತುವರಿದಿದ್ದ ಹಾವಿನ ರಕ್ಷಣೆ

(ನ್ಯೂಸ್ ಕಡಬ) newskadaba.com ಪುತ್ತೂರು, ಆ. 17.         ಬೈಕಿನ ಸೀಟಿನೊಳಗಡೆ  ಹಾರುವ ಹಾವೊಂದು ಸೇರಿಕೊಂಡ ಘಟನೆ  ಇಂದು ದರ್ಬೆಯಲ್ಲಿ ನಡೆದಿದೆ.  

ಉರಗ ಪ್ರೇಮಿ ಬನ್ನೂರಿನ ತೇಜಸ್ ಎಂಬವರು ರಕ್ಷಣೆ ಮಾಡಿದ್ದಾರೆ. ದರ್ಬೆಯಲ್ಲಿರುವ ಗ್ಯಾರೇಜ್ ಒಂದಕ್ಕೆ ಬೈಕ್ ನಲ್ಲಿಬಂದ ವ್ಯಕ್ತಿಯೊಬ್ಬರು ತನ್ನ ಬೈಕ್ ದುರಸ್ಥಿಗೊಳಿಸುವಂತೆ ಮೆಕ್ಯಾನಿಕ್ ಗೆ ತಿಳಿಸಿಮೆಕ್ಯಾನಿಕ್ ಬೈಕ್ ಸೀಟ್ ಕಳಚುತ್ತಿದ್ದಂತೆ ಬಣ್ಣ ಬಣ್ಣದ ಹಾವೊಂದು ಬೈಕ್ ಸೀಟ್ ಅಡಿಯಲ್ಲಿ ಸುತ್ತುವರಿದುಕೊಂಡಿರುವುದು ಬೆಳಕಿಗೆ ಬಂತು. ಬಳಿಕ ಉರಗ ತಜ್ಞ ತೇಜಸ್ ಎಂಬವರಿಗೆ ಕುರಿತು ಮಾಹಿತಿ ನೀಡಿ, ತೇಜಸ್ ಅವರು ಬಂದು ಬೈಕ್ ಸೀಟ್ ಒಳಗೆ ಸುತ್ತುವರಿದ್ದ ಹಾವನ್ನು ರಕ್ಷಣೆ ಮಾಡಿದರು. ಹಾವು ಅಲಂಕಾರಿಕ ತೇಲುವ ಅಥವಾ ಹಾರುವ ಹಾವಾಗಿದೆ. ಇದು ವಿಷ ರಹಿತಹಾವು ಎಂದು ಅಲ್ಲಿಸೇರಿದ್ದ ಜನರಿಗೆ ಮಾಹಿತಿನೀಡಿದರಲ್ಲದೆ ಹಾವನ್ನು ಕಾಡಿಗೆ ಬಿಡುವ ಮೂಲಕ ಹಾವಿನ ರಕ್ಷಣೆ ಮಾಡಿದರು.

Also Read  ಕಾನೂನು ಬಾಹಿರ ಶಸ್ತ್ರಾಸ್ತ್ರ ತರಬೇತಿ ➤ ಫ್ರೀಡಂ ಕಮ್ಯೂನಿಟಿ ಹಾಲ್‌ NIA ವಶಕ್ಕೆ

error: Content is protected !!
Scroll to Top