ಬೆಂಗಳೂರಿನಲ್ಲಿ ನಡೆಯುವ *ಹೀರೊ ಹೈ ಲೀಗ್* ತಂಡಕ್ಕೆ ಆರಂತೋಡಿನ ಯುವಕ ಅದ್ನಾನ್ ಪಟೇಲ್ ಆಯ್ಕೆ

(ನ್ಯೂಸ್ ಕಡಬ) newskadaba.com ಅರಂತೋಡು, ಆ,17:  ಇತ್ತೀಚೆಗೆ ಮಂಗಳೂರು ಎಫ್ ಸಿ ಮಂಗಳೂರು ಅಕಾಡೆಮಿಗೆ ನಡೆದ ಅಂಡರ್18 ಆಯ್ಕೆ ಟ್ರಯಲ್ ನಲ್ಲಿ ಉತ್ತಮ ಪ್ರದರ್ಶನ ತೋರಿದ ಕಾರಣ ಡಿಸೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯುವ ಹೀರೊ ಹೈ ಲೀಗ್ ಪಂದ್ಯಾಟದಲ್ಲಿ ಎಫ್ ಸಿ ಮಂಗಳೂರು ಫುಟ್ಬಾಲ್ ಅಸ್ಸೋಸಿಯೇಷನ್ ತಂಡದ ಪರವಾಗಿ ಅದ್ನಾನ್ ಪಟೇಲ್ ಪಾಲ್ಗೊಳ್ಳಲಿದ್ದಾರೆ.

 

ಆಲ್ ಇಂಡಿಯಾ ಫುಟ್ಬಾಲ್ ಅಸ್ಸೋಸಿಯೇಷನ್ ಗೆ ತನ್ನನ್ನು ನೋಂದಾಯಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಹಲವಾರು ಜಿಲ್ಲಾ  ಮತ್ತು ತಾಲೂಕು ಮಟ್ಟದ ಪಂದ್ಯಾವಳಿಯನ್ನು ಪ್ರತಿನಿಧಿಸಿ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.  ಪ್ರಸ್ತುತ ರೋಟರಿ ಇಂಗ್ಲಿಷ್ ಮೀಡಿಯಂ ಸುಳ್ಯ ಶಾಲೆ ಯಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅದ್ನಾನ್ ಅವರು ಸಹರಾ ಯುನೈಟೆಡ್ ಸುಳ್ಯ ಫುಟ್ಬಾಲ್ ತಂಡದ ಖಾಯಂ ಸದಸ್ಯ ಹಾಗೂ ಈ ಹಿಂದೆ ಸಹರಾ ಯುನೈಟೆಡ್ ಫುಟ್ಬಾಲ್ ಅಸ್ಸೋಸಿಆಶನ್ ಸುಳ್ಯ ಇದರ ತರಬೇತುದಾರರಾದ ಮುನಾಫರ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಆರಂತೋಡು ಜುಮಾ ಮಸ್ಜಿದ್ ಇದರ ಮಾಜಿ ಅಧ್ಯಕ್ಷರಾದ ಅಬ್ದುಲ್ ಕಾದರ್ ಪಟೇಲ್ ಹಾಗೂ ಜೈನಾಬಿ ದಂಪತಿಯ ಪುತ್ರ. ಯುವ ಪ್ರತಿಭೆಗಳನ್ನು ಹುಡುಕಿ ಅವರಲ್ಲಿರುವ ಸಾಮರ್ಥ್ಯ ಹೊರಗೆಡವಲು ವೇದಿಕೆ ಕಲ್ಪಿಸುವ ಕಾರ್ಯವನ್ನು ಸಹರಾ ಫುಟ್ಬಾಲ್ ಅಸ್ಸೋಸಿಯೇಷನ್ ಸುಳ್ಯ ಮಾಡುತ್ತಿದೆ. ಯುವ ಆಟಗಾರರನ್ನು ಪೋಷಿಸಲು ಮತ್ತು ಬೆಳೆಸಲು ಎಲ್ಲ ರೀತಿಯ ಸೌಲಭ್ಯಗಳನ್ನೂ ಒದಗಿಸಲಾಗುತ್ತದೆ,ಇದರಿಂದ ಭಾರತ ತಂಡಕ್ಕೆ ಉತ್ತಮ ಆಟಗಾರರನ್ನು ಕಾಣಿಕೆಯಾಗಿ ನೀಡಲು ಸಾಧ್ಯವಾದರೆ ನಮ್ಮ ಕೆಲಸ ಸಾರ್ಥಕವಾದಂತೆಯೇ ಎಂದು ಸಹರಾ ತಂಡದ ವ್ಯವಸ್ಥಾಪಕ ರು ಹೇಳುತ್ತಾರೆ.

Also Read  ಮಂಗಳೂರು: ಲಕ್ಷ್ಮಣ ಮಲ್ಲೂರುರವರಿಗೆ ತುಳು ಅಕಾಡೆಮಿಯಿಂದ ಸನ್ಮಾನ

 

error: Content is protected !!
Scroll to Top