ಕೋಡೆರಿ ದೋಣಿ ದುರಂತ ➤ ಓರ್ವ ಮೀನುಗಾರನ ಮೃತ ದೇಹ ಪತ್ತೆ

(ನ್ಯೂಸ್ ಕಡಬ) newskadaba.com ಕುಂದಾಪುರ, ಆ,17:  ಕುಂದಾಪುರ ಕಿರಿಮಂಜೇಶ್ವರ ಬಳಿ ಕೊಡೇರಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಪಲ್ಟಿಯಾಗಿ ನಾಲ್ವರು ಸಾವನ್ನಪ್ಪಿ, 7 ಮೀನುಗಾರರನ್ನು ರಕ್ಷಿಸಿದ ಘಟನೆ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಕೊಡೇರಿಯಲ್ಲಿ ರವಿವಾರ ಮಧ್ಯಾಹ್ನ ನಡೆದಿತ್ತು.

 

 

ಈ ಪೈಕಿ ಓರ್ವ ವ್ಯಕ್ತಿಯ ಮೃತ ದೇಹ ಸೋಮವಾರ ಪತ್ತೆಯಾಗಿದೆ.ಪತ್ತೆಯಾದ ಮೃತದೇಹವನ್ನು ಮೀನುಗಾರ  ನಾಗರಾಜ್ ಖಾರ್ವಿಯದ್ದು ಎಂದು ಗುರುತಿಸಲಾಗಿದ್ದು ಇತರೆ ಮೂವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

Also Read  ಕಾರ್ಕಳ: ತಾಯಿಯ ಅಕಾಲಿಕ ಸುದ್ದಿ ತಿಳಿದ ಮಗಳು ಆತ್ಮಹತ್ಯೆ

 

error: Content is protected !!
Scroll to Top