ನವೆಂಬರ್ 16 ರಿಂದ ಎರಡು ತಿಂಗಳು ಶಬರಿಮಲೆಗೆ ಭಕ್ತರ ಪ್ರವೇಶಕ್ಕೆ ಅನುಮತಿ ಕೊರೊನಾ ನೆಗೆಟಿವ್ ಸರ್ಟಿಫಿಕೇಟ್ ಕಡ್ಡಾಯ

(ನ್ಯೂಸ್ ಕಡಬ) newskadaba.com ಶಬರಿಮಲೆ, ಆ. 17, ಪ್ರಸಿದ್ಧ ಅಯ್ಯಪ್ಪ ದೇಗುಲಕ್ಕೆ ಭಾನುವಾರದಿಂದ ಪ್ರವೇಶ ತೆರೆಯಲಾಗಿದೆ. ಒಂದು ತಿಂಗಳಲ್ಲಿ ಐದು ದಿನಗಳ ಪೂಜೆ ನೆರವೇರಿಸಲು ಅನುಮತಿ ನೀಡಲಾಗಿದೆ.


ಮಲಯಾಳಿ ಪಂಚಾಂಗದ ಮೊದಲ ತಿಂಗಳು (ಆಗಸ್ಟ್) ಚಿಂಗಮ್‌ನಲ್ಲಿ ಅಯ್ಯಪ್ಪ ಸ್ವಾಮಿಗೆ ಐದು ದಿನಗಳ ಪೂಜೆ ನೆರವೇರಿಸಲಾಗುತ್ತದೆ. ಆದರೆ, ಕೋವಿಡ್‌–19 ಕಾರಣದಿಂದಾಗಿ ಭಕ್ತಾದಿಗಳ ಪ್ರವೇಶ ನಿಷೇಧ ಮುಂದುವರಿದಿದೆ.

ಆಗಸ್ಟ್‌ 21ರ ವರೆಗೂ ದೇಗುಲ ತೆರೆದಿರಲಿದೆ ಹಾಗೂ ಸಾಮಾನ್ಯ ಪೂಜಾ ಕೈಂಕರ್ಯಗಳು ನಡೆಯಲಿವೆ. ಕೋವಿಡ್‌ನಿಂದಾಗಿ ಭಕ್ತಾದಿಗಳಿಗೆ ದೇಗುಲ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿಲ್ಲ ಎಂದು ಶಬರಿಮಲೆ ದೇವಾಲಯದ ನಿರ್ವಹಣೆ ನಡೆಸುತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಹೇಳಿದೆ.

Also Read  ಹಣಕ್ಕಾಗಿ 2 ವರ್ಷದ ಮಗುವನ್ನು ಹತ್ಯೆ ಮಾಡಿ ಚೀಲದಲ್ಲಿ ಬಚ್ಚಿಟ್ಟ ಪಾಪಿ

ಓಣಂ ಪೂಜೆಗಾಗಿ ಮತ್ತೆ ಆಗಸ್ಟ್‌ 29ರಿಂದ ಸೆಪ್ಟೆಂಬರ್‌ 2ರ ವರೆಗೂ ದೇಗುಲ ತೆರೆಯಲಿದೆ ಎಂದು ಟಿಡಿಬಿ ಪ್ರಕಟಣೆಯಲ್ಲಿ ತಿಳಿಸಿದೆ. ನವೆಂಬರ್‌ 16ರಿಂದ ಭಕ್ತಾದಿಗಳಿಗೆ ದರ್ಶನಕ್ಕೆ ಎರಡು ತಿಂಗಳು ದೇಗುಲ ತೆರೆಯಲಿದ್ದು, ಶಬರಿಮಲೆಗೆ ಬರುವವರು ಕೊರೋನಾ ನೆಗೆಟಿವ್ ಸರ್ಟಿಫಿಕೆಟ್‌ ತರುವುದನ್ನು ಕಡ್ಡಾಯ ಮಾಡಿರುವುದಾಗಿ ತಿಳಿಸಲಾಗಿದೆ.

error: Content is protected !!
Scroll to Top