ಕಡಬ: ನೆಟ್ವರ್ಕ್ ಸಮಸ್ಯೆ ಕೋವಿಡ್ ಟೆಸ್ಟ್‍ಗೆ ಪರದಾಡುತ್ತಿರುವ ಆರೋಗ್ಯ ಸಿಬ್ಬಂದಿ

(ನ್ಯೂಸ್ ಕಡಬ) newskadaba.com ಕಡಬ, ,17: ಕುಟ್ರುಪಾಡಿಯಲ್ಲಿ ಕೋವಿಡ್ ರ್ಯಾಪಿಡ್ ಅಂಟಿಜನ್ ಟೆಸ್ಟ್ ಪ್ರಾರಂಭವಾಗಿದ್ದು ಒಂದೇಡೆ ಕೊರೋನಾ ಪರೀಕ್ಷೆಗೆ ಹಿಂದೇಟು ಹಾಕುತ್ತಿರುವುದು ಅಲ್ಲದೆ ನೆಟ್ ವರ್ಕ್ ಸಮಸ್ಯೆಯಿಂದ ಆರೋಗ್ಯ ಸಿಬ್ಬಂದಿಗಳು ಪರದಾಡುತ್ತಿದ್ದಾರೆ.


ಕಡಬ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಕುಟ್ರುಪಾಡಿ ಹಿ.ಪ್ರಾ.ಶಾಲೆಯಲ್ಲಿ ರ್ಯಾಪಿಡ್ ಅಂಟಿಜೆನ್ ಟಸ್ಟ್ ಆಯೋಜಿಸಲಾಗಿದೆ ಬೆಳಿಗ್ಗೆ ಹನ್ನೊಂದು ಗಂಟೆಯವರೆಗೆ ಕೇವಲ ನಾಕ್ಕೈದು ಮಂದಿ ಮಾತ್ರ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.ಜನ ಕೊರೋನ ಪರೀಕ್ಷೆ ಮಾಡಿಸಿಕೊಳ್ಳಲು ಹಿಂದೇಟು  ಹಾಕುತ್ತಿದ್ದಾರೆ.  ಇನ್ನೋಂದು ಸಮಸ್ಯೆ ಉದ್ಬವಿಸಿದ್ದು ಕುಟ್ರುಪಾಡಿ ಗ್ರಾಮದ ಹೊಸಮಠ ದಲ್ಲಿ ನೆಟ್ ವರ್ಕ್ ಸಮಸ್ಯೆ ಯಿಂದ ಒಟಿಪಿ ಬರಲು ತಡವಾಗುತ್ತಿದೆ. ಒಟಿಪಿ ಬಂದಾಗ ಅದರ ಅವಧಿಯೂ ಕಳೆದಿರುತ್ತದೆ. ಒಟ್ಟಿನಲ್ಲಿ ಕೊರೋನಾ ಉಚಿತ ಪರೀಕ್ಷೆಗೆ ಜನರ ಹಿಂದೇಟು ಮತ್ತು ನೆಟ್ವರ್ಕ್ ಸಮಸ್ಯೆಯಿಂದಾಗಿ ಆರೋಗ್ಯ ಸಿಬ್ಬಂದಿಗಳು ಪರದಾಡುವಂತಾಗಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ.

Also Read  ಪುತ್ತೂರಿನಿಂದ ಮಂಗಳೂರಿಗೆ ಖಾಸಗಿ ಬಸ್ಸು ಓಡಾಟ ಆರಂಭ...!!!

 

 

error: Content is protected !!
Scroll to Top