ತುಳುನಾಡು ಹ್ಯಾಷ್‌ಟ್ಯಾಗ್‌ ಎಜ್ಯುಕೇಷನ್ ಟ್ವೀಟ್ ಅಭಿಯಾನ➤ ತುಳು ಭಾಷೆ ಅಭಿಯಾನಕ್ಕೆ ನಟ ಜಗ್ಗೇಶ್ ಬೆಂಬಲ

(ನ್ಯೂಸ್ ಕಡಬ) newskadaba.com ಮಂಗಳೂರು, ಆ,16:  ತುಳು ಭಾಷೆ ಅಭಿಯಾನಕ್ಕೆ ಕನ್ನಡದ ನವರಸ ನಾಯಕ ಜಗ್ಗೇಶ್ ಬೆಂಬಲ ನೀಡಿದ್ದಾರೆ. ನಾನು ಕೂಡಾ ನಿಮ್ಮೊಂದಿಗೆ ತುಳು ಭಾಷೆ ಅಭಿಯಾನಕ್ಕೆ ಬರುತ್ತೇನೆ ಎಂದು ಜಗ್ಗೇಶ್ ಟ್ವೀಟ್ ಮಾಡುವ ಮೂಲಕ ಬೆಂಬಲ ಸೂಚಿಸಿದ್ದಾರೆ. ತುಳು ಭಾಷೆಯನ್ನುನೂತನ ಶಿಕ್ಷಣ ನೀತಿ-2020 ರಡಿಯಲ್ಲಿ ಸೇರಿಸಲು ಮನವಿ ಮಾಡುವ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಗಮನವನ್ನು ಸೆಳೆಯಲು ಆಗಸ್ಟ್ 16ರಂದು ಜೈ ತುಳುನಾಡು ಸಂಘಟನೆ ಎಜ್ಯುಕೇಷನ್ ಎನ್ನುವ ಹ್ಯಾಷ್‌ಟ್ಯಾಗ್‌ನಲ್ಲಿ ಟ್ವೀಟ್ ಅಭಿಯಾನ ಆಯೋಜಿಸಿದೆ.

ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆ ಸಿಗಬೇಕು ಮತ್ತು ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರಿಸಬೇಕೆನ್ನುವ ಒತ್ತಾಯ ಹೆಚ್ಚಿರುವ ಬೆನ್ನಲ್ಲೆ ಈಗ ಶಿಕ್ಷಣದಲ್ಲಿ ತುಳು ಸ್ಥಾನಮಾನ ಬೇಡಿಕೆಗೆ ಶಕ್ತಿ ಹೆಚ್ಚಿದಂತಾಗಿದೆ.5ನೇ ಅಥವಾ 8ನೇ ತರಗತಿಯವರೆಗೆ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಸ್ಥಳಿಯ ಅಥವಾ ಮಾತೃಭಾಷೆಯೇ ಬೋಧನ ಮಾಧ್ಯಮವಾಗಿರಬೇಕೆಂಬುದನ್ನು ಉಲ್ಲೇಖಿಸಲಾಗಿದೆ.ತುಳು ಭಾಷೆ ಅಭಿಯಾನಕ್ಕೆ ಕನ್ನಡದ ನವರಸ ನಾಯಕ ಜಗ್ಗೇಶ್ ಬೆಂಬಲ ನೀಡಿದ್ದಾರೆ. ನಾನು ಕೂಡಾ ನಿಮ್ಮೊಂದಿಗೆ ತುಳು ಭಾಷೆ ಅಭಿಯಾನಕ್ಕೆ ಬರುತ್ತೇನೆ ಎಂದು ಜಗ್ಗೇಶ್ ಟ್ವೀಟ್ ಮಾಡುವ ಮೂಲಕ ಬೆಂಬಲ ಸೂಚಿಸಿದ್ದಾರೆ. ಸರ್ಕಾರವನ್ನು ಎಚ್ಚರಿಸುವ ನಿಟ್ಟಿನಲ್ಲಿ ಹಲವಾರು ಮಂದಿ ಈಗಾಗಲೇ ಹ್ಯಾಷ್‌ಟ್ಯಾಗ್‌ ಎಜ್ಯುಕೇಷನ್ ಟ್ವೀಟ್ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಇನ್ನು ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ತುಳು ಭಾಷಿಕ ವಿದ್ಯಾರ್ಥಿಗಳಿಗೆ ತುಳು ಭಾಷೆಯಲ್ಲಿಯೇ ಶಿಕ್ಷಣ ಸಿಗುವಂತಾಗಬೇಕು ಎಂಬ ನಿಟ್ಟಿನಲ್ಲಿ ಈ ಅಭಿಯಾನ ಆರಂಭಿಸಲಾಗಿದೆ.

Also Read  ಗಂಡಿಬಾಗಿಲಿನಲ್ಲಿ ಭೂಕುಸಿತ ► ನೀರಿನಲ್ಲಿ ಕೊಚ್ಚಿ ಹೋದ ರಬ್ಬರ್ ಮರಗಳು

 

 

error: Content is protected !!
Scroll to Top