(ನ್ಯೂಸ್ ಕಡಬ) newskadaba.com ಮಂಗಳೂರು, ಆ. 16, ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ್ ವಿಶ್ವವಿದ್ಯಾಲಯದ ಸಿಟಿ ಕ್ಯಾಂಪಸ್ನಲ್ಲಿ 74ನೇ ಸ್ವಾತಂತ್ರೋತ್ಸವನ್ನುಆಚರಿಸಲಾಯಿತು. ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಸಿ.ಎ. ಎ. ರಾಘವೇಂದ್ರ ರಾವ್ರವರು ಧ್ವಜಾರೋಹಣವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ಸಿಕ್ಕಂತಹ ಸಂದರ್ಭದಲ್ಲಿದ್ದಂತಹ ಉತ್ಸಾಹ, ತ್ಯಾಗಗಳು ಇಂದು ಕೂಡಾ ಮುಂದುವರಿಬೇಕು. ಪ್ರತಿಯೊಬ್ಬ ಭಾರತೀಯರು ದೇಶದ ಸಮೃದ್ಧಿಯಾಗಿ ಶ್ರಮವಹಿಸಬೇಕು. ಪ್ರತಿಮನೆಗಳಲ್ಲಿ ಉದ್ಯೋಗಾಧಾರಿಯತ ಪದವಿಯನ್ನು ಪಡೆದ ಮಕ್ಕಳಿರಬೇಕು ಎಂದರು. ಈ ಸಂದರ್ಭ ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಸ್. ಐತಾಳ್, ಕುಲಸಚಿವ ಡಾ. ಅನಿಲ್ ಕುಮಾರ್, ಕುಲಸಚಿವ (ಅಭಿವೃದ್ಧಿ) ಡಾ. ಅಜಯ್ ಕುಮಾರ್ವೇ ದಿಕೆಯಲ್ಲಿ ಉಪಸ್ಥಿತರಿದ್ದರು. ಈ ವೇಳೆ ನವೀಕರಿಸಿದ ಲಿಫ್ಟ್ನ್ನುಸಿ.ಎ. ಎ. ರಾಘವೇಂದ್ರ ರಾವ್ರವರು ಉದ್ಘಾಟಿಸಿದರು.
ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಆಂಡ್ ಕಾಮರ್ಸ್ನಡೀನ್ ಪ್ರೊ. ಕೀರ್ತನ್ ರಾಜ್, ಕಾಲೇಜ್ ಆಫ್ ಏವಿಯೇಷನ್ ಸ್ಟಡೀಸ್ ಪ್ರೊ. ಪವಿತ್ರಕುಮಾರಿ, ಕಾಲೇಜ್ ಆಫ್ ಕಂಪ್ಯೂಟರ್ ಸೈನ್ಸ್ ಅಂಡ್ ಇನ್ಪಾರ್ಮೇಶನ್ ಸೈನ್ಸ್ನಡೀನ್ ಪ್ರೊ ಶ್ರೀಧರ ಆಚಾರ್ಯ, ಕಾಲೇಜ್ ಆಫ್ ಸೋಶಿಯಲ್ ಸೈನ್ಸ್ ಅಂಡ್ ಹ್ಯುಮ್ಯಾನಿಟಿಯಡೀನ್ ಡಾ. ಲವೀನ ಡಿʼಮೆಲ್ಲೋ, ಕಾಲೇಜ್ ಆಫ್ ಹೊಟೇಲ್ ಮ್ಯಾನೇಜ್ಮೆಂಟ್ ಅಂಡ್ ಟೂರಿಸಂನ ಪ್ರೊ ಸ್ವಾಮಿನಾಥನ್ ಎಸ್., ಕಾಲೇಜ್ ಆಫ್ ಫಿಸಿಯೋಥೆರಪಿಯ ಡಾ. ಎಸ್.ರಾಜಶೇಖರ್, ಕಾಲೇಜ್ ಆಫ್ ಎಜ್ಯುಕೇಶನ್ನ ಡಾ. ಜಯಶ್ರೀ ಕೆ, ದೈಹಿಕ ಶಿಕ್ಷಣ ಶಿಕ್ಷಕಿ ಸುಪ್ರಿಯ ಅಡಿಗ, ಶ್ರೀನಿವಾಸ್ ವಿಶ್ವವಿದ್ಯಾಲಯ ಸಿಟಿ ಕ್ಯಾಂಪಸ್ನ ಭೋಧಕ – ಭೋಧಕೇತರ ಸಿಬ್ಬಂಧಿಗಳು ಉಪಸ್ಥಿತರಿದ್ದರು.