ಕೊರೋನಾ ಸಮರ್ಥ ನಿರ್ವಹಣೆ ➤ ಸಚಿವ ಕೋಟ ಸಂದೇಶ

(ನ್ಯೂಸ್ ಕಡಬ) newskadaba.com ಮಂಗಳೂರು, ಆ,16:  ಕೊರೋನಾ ಮಹಾಮಾರಿ ಆತಂಕ ಉಂಟು ಮಾಡಿದ್ದರೂ, ಸರ್ಕಾರ ಹಾಗೂ ಜಿಲ್ಲಾಡಳಿತ ಅದನ್ನು ಸವಾಲಾಗಿ ಸ್ವೀಕರಿಸಿ ಸಮರ್ಥವಾಗಿ ನಿರ್ವಹಣೆ ಮಾಡುತ್ತಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ನಗರದ ನೆಹರು ಮೈದಾನದಲ್ಲಿ ಶನಿವಾರ ದ.ಕ ಜಿಲ್ಲಾ ಮಟ್ಟದ ಸ್ವಾತಂತ್ರೊೃೀತ್ಸವ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು.

ಜನತೆಯ ಆರೋಗ್ಯ ರಕ್ಷಣೆಯಲ್ಲಿ ರಾಜಿ ಮಾಡಿಕೊಳ್ಳದೆ ಉತ್ಕೃಷ್ಟ ಚಿಕಿತ್ಸೆಯನ್ನು ಕೊರೋನಾ ಸೋಂಕಿತರಿಗೆ ನೀಡಲಾಗುತ್ತಿದೆ. ಆತಂಕದ ನಡುವೆಯೂ ನೆಮ್ಮದಿ ಮೂಡಿಸುವಲ್ಲಿ ಸಫಲರಾಗಿದ್ದೇವೆ. ಲಾಕ್‌ಡೌನ್ ಸಂದರ್ಭದಲ್ಲೂ ನಾನಾ ಸಂಘ ಸಂಸ್ಥೆಗಳು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿದ್ದು, ಸಂಕಷ್ಟಕ್ಕೀಡಾದ ಜನರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಲಾಗಿದೆ ಎಂದರು. ಧ್ವಜಾರೋಹಣಕ್ಕೆ ಮುನ್ನ ಸಚಿವರು ಪರೇಡ್ ದಂಡ ನಾಯಕ ಎಸಿಪಿ ಎಂ.ಎ.ಉಪಾಸೆಯವರ ನೇತೃತ್ವದಲ್ಲಿ ಪರೇಡ್ ವೀಕ್ಷಿಸಿದರು. ಡೊಂಗರಕೇರಿ ಕೆನರಾ ಪ್ರೌಢಶಾಲೆ ವಿದ್ಯಾರ್ಥಿಗಳು ರಾಷ್ಟ್ರಗೀತೆ, ನಾಡಗೀತೆ, ರೈತ ಗೀತೆ ಜತೆಗೆ ದೇಶಭಕ್ತಿ ಗೀತೆಗಳನ್ನು ಹಾಡಿದರು.

Also Read  ಅ. 31ರಿಂದ ಮಂಗಳೂರು ಏರ್ಪೋರ್ಟ್ ಆಡಳಿತ ಸಂಪೂರ್ಣ ಅದಾನಿ ತೆಕ್ಕೆಗೆ...!

error: Content is protected !!
Scroll to Top