ಕಡಬ : ಯಶೋದಾ ಜನರಲ್ ಸ್ಟೋರ್ ಮುಂಭಾಗದಲ್ಲಿ ರೋಟರಿ ಕ್ಲಬ್ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

(ನ್ಯೂಸ್ ಕಡಬ) newskadaba.com ಕಡಬ, ಆ,15:  ದೇಶದಾದ್ಯಂತ ಕೊರೋನಾ ತನ್ನ ಕಬಂಧಬಾಹುವನ್ನು ಚಾಚಿಕೊಂಡಿದೆ. ಪರಿಣಾಮ ಈ ವರ್ಷದ ಎಲ್ಲ ಹಬ್ಬ ಹರಿದಿಗಳಿಗೆ ಕೋರೋನಾ ಅಡ್ಡಿಯಾಗಿದೆ . ಅದರಂತೆ ಇಂದು ಎಲ್ಲೆಡೆ ಸರಳವಾಗಿ 74ನೇ ಸ್ವಾತಂತ್ರ್ಯೋತ್ಸವ ದಿನಚಾರಣೆಯನ್ನು ಸರಳವಾಗಿ ಆಚರಿಸಲಾಯಿತು.

 

 

ಕಡಬದ ಯಶೋದಾ ಜನರಲ್ ಸ್ಟೋರ್ ಮುಂಭಾಗದಲ್ಲಿ ರೋಟರಿ ಕ್ಲಬ್ ವತಿಯಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.  ಧ್ವಜಾರೋಹಣವನ್ನು ಪಂಜ ಉಪ ವಲಯ ಅರಣ್ಯಾಧಿಕಾರಿ ಸಂತೋಷ್ ರೈ  ರವರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷರಾದ ಕುರೀಯನ್ ಮಾಸ್ಟರ್, ತೋಮಸ್ ಮಾಸ್ಟರ್, ರಫೀಕ್ ಎಸ್ ಎಮ್, ಗ್ರೇಸಿ ಟೀಚರ್, ಸೇರಿದಂತೆ, ರಿಕ್ಷಾ ಚಾಲಕ ಮಾಲಾಕರು, ಜೀಪು ಚಾಲಕ ಮಾಲಾಕರು, ರೋಟರಿ ಪದಾಧಿಕಾರಿಗಳು, ಯಶೋಧ ಮಾಲಾಕರು ಹಾಗೂ ಸಿಬ್ಬಂದಿ ವರ್ಗ, ಹೋಟೆಲ್ ಗಣೇಶ್ ಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Also Read  2020-21ನೇ ಸಾಲಿನ ಸೈನ್ಸ್ ಒಲಿಂಪಿಯಾಡ್ ಪರೀಕ್ಷೆಗಳು ಆನ್ ಲೈನ್‍ ನಲ್ಲಿ...

 

 

error: Content is protected !!
Scroll to Top