(ನ್ಯೂಸ್ ಕಡಬ) newskadaba.com ಕಡಬ, ಆ,15: ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆಯಲ್ಲಿ 74ನೇ ಸ್ವಾತಂತ್ರ್ಯೋತ್ಸವ ದಿನಚಾರಣೆಯನ್ನು ಧ್ವಜಾರೋಹಣ ಮಾಡುವ ಮೂಲಕ, ನಿವೃತ್ತ ಹವಾಲ್ದಾರ್, ಶಾಲೆಯ ಪ್ರಾಕ್ತನ ವಿದ್ಯಾರ್ಥಿಯಾದ ಸೋಮಶೇಖರ್ ರವರು ನೆರವೇರಿಸಿದರು.
ಬಳಿಕ ಮಾತನಾಡಿದ ಅವರು “ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಯೋಧರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಅವರ ತ್ಯಾಗ ಬಲಿದಾನಗಳು ನಮಗೆಲ್ಲರಿಗೂ ಕೂಡ ಪ್ರೇರಣಾದಾಯಕ ವಾಗಿರಲಿ ಕೊರೋನ ಆದಂತಹ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಸಂಭ್ರಮದಿಂದ ಸ್ವಾತಂತ್ರ್ಯೋತ್ಸವವನ್ನು ಆಚರಿಸುವುದು ಕಷ್ಟವಾದರೂ, ಅಧ್ಯಾಪಕರು ಹಾಗೂ ಸಿಬ್ಬಂದಿ ವರ್ಗದವರು ಅತ್ಯಂತ ಸರಳ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವುದು ನಮಗೆಲ್ಲರಿಗೂ ಕೂಡ ನಮ್ಮ ದೇಶದ ಮೇಲೆ ಇರುವ ಅಭಿಮಾನವನ್ನು ತೋರಿಸಿಕೊಡುತ್ತದೆ “ಎಂದು ನಿವೃತ್ತ ಹವಾಲ್ದಾರ್ ಶಾಲೆಯ ಪ್ರಾಕ್ತನ ವಿದ್ಯಾರ್ಥಿ ಯಾದ ಸೋಮಶೇಖರ್ ನುಡಿದರು. ಹದಿನಾರು ವರ್ಷಗಳ ಕಾಲ ಭೂಸೇನೆಯಲ್ಲಿ ಜಮ್ಮು ಕಾಶ್ಮೀರ ಅಸ್ಸಾಂ ,ಕಾರ್ಗಿಲ್, ದಿಲ್ಲಿ ,ಕೊಲ್ಕತ್ತಾ ಮುಂತಾದೆಡೆ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಸೋಮಶೇಖರ್ ಅವರು ಧ್ವಜಾರೋಹಣಗೈದು ಮಾತನಾಡಿದರು .ಈ ಸಂದರ್ಭದಲ್ಲಿ ಶಾಲೆಯ ಪ್ರಾಕ್ತನ ವಿದ್ಯಾರ್ಥಿ ಉದ್ಯಮಿಯಾಗಿರುವ ಮಾರ್ಷಲ್ ಶಾಲಾ ಎಸ್.ಡಿ.ಎಂ.ಸಿಅಧ್ಯಕ್ಷರಾಗಿದ್ದ ಶ್ರೀಮತಿ ಅನಿತಾ ಸಣ್ಣಾರ ಸತೀಶ ಹಾಗೂ ಅಧ್ಯಾಪಕ ವರ್ಗದವರು ಉಪಸ್ಥಿತರಿದ್ದರು. ಮುಖ್ಯಗುರುಗಳಾದ ಹಿರಿಯಣ್ಣ ಗೌಡ ಸ್ವಾಗತಿಸಿ ಪ್ರಶಾಂತ ವಂದಿಸಿದರು.