ನಕಲಿ ಜಾತಿ ಪ್ರಮಾಣ ಪತ್ರ ಆರೋಪ ಸಾಬೀತು ► ಗೃಹ ಇಲಾಖೆಯ ಸಲಹೆಗಾರ ಕೆಂಪಯ್ಯಗೆ ಸಂಕಷ್ಟ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.15. ರಾಜ್ಯ ಗೃಹ ಇಲಾಖೆಯ ಸಲಹೆಗಾರ ಕೆಂಪಯ್ಯಗೆ ನಕಲಿ ಪ್ರಮಾಣ ಪತ್ರ ನೀಡಿ ಐಪಿಎಸ್ಹುದ್ಧೆ ಪಡೆದಿರುವ ಹಿನ್ನೆಲೆಯಲ್ಲಿ ಸಿಬಿಐ ಸಂಕಷ್ಟ ಎದುರಾಗಿದೆ. ಕೆಂಪಯ್ಯ ವಿರುದ್ಧ ಎಸಿಬಿಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ದೂರದಾರರೊಬ್ಬರು ಕೆಂಪಯ್ಯ ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ಒತ್ತಾಯ ಮಾಡಿ ಹೈಕೋರ್ಟ್​​ಗೆ ರಿಟ್ಅರ್ಜಿ ಸಲ್ಲಿಸಿದ್ದಾರೆ.

 

ನಕಲಿ ಪ್ರಮಾಣ ಪತ್ರ ಆರೋಪಕ್ಕೆ ಸಂಬಂಧಪಟ್ಟಂತೆ 1990 ರಲ್ಲಿ ಪೊಲೀಸ್ಇಲಾಖೆಯು ತನಿಖೆ ನಡೆಸಿ ಕೆಂಪಯ್ಯ ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಐಪಿಎಸ್​​ ಹುದ್ಧೆ ಪಡೆದಿದ್ದಾರೆ ಎಂದು ಸಾಬೀತು ಮಾಡಿತ್ತು. ಇಲಾಖೆ ವರದಿ ಆಧಾರಿಸಿ  ಅಜಯ್ಕುಮಾರ್ಸಿಂಗ್ಕ್ರಮ ಕೈಗೊಳ್ಳುವ ಮುನ್ನ ಕೆಂಪಯ್ಯ ಸ್ವಯಂ ನಿವೃತ್ತಿ ಪಡೆದು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದರು. ಆದರೆ ಇದೀಗ ಪ್ರಕರಣ ಹೈಕೋರ್ಟ್ಮೆಟ್ಟಿಲೇರಿದ್ದು ಇದೀಗ ಕೆಂಪಯ್ಯರನ್ನ ಸಿಬಿಐ ಭೂತ ಕಾಡಲಾರಂಭಿಸಿದೆ.

Also Read  ಕಡಬ: ಮೊಗೇರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

 

error: Content is protected !!
Scroll to Top