ಸರಳಿಕಟ್ಟೆ: ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯದಿನಾಚರಣೆ

(ನ್ಯೂಸ್ ಕಡಬ) newskadaba.com ಸರಳಿಕಟ್ಟೆ, ಆ.15, 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಕೋವಿಡ್-19 ಹಿನ್ನೆಲೆಯಲ್ಲಿ ಸರಳವಾಗಿ ಸರಕಾರಿ ಪ್ರೌಢ ಶಾಲೆ ಸರಳಿಕಟ್ಟೆಯಲ್ಲಿ ಆಚರಿಸಲಾಯಿತು.


ಶಾಲಾ ಮುಖ್ಯೋಪಾಧ್ಯಾಯರು ಜಾವೇದ್ ಆರ್, ಧ್ವಜಾರೋಹಣಗೈದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರಾದ ರಾಜೇಸಾಬ್, ವಿಜಯಶ್ರೀ, ಸಪ್ನಾ ರಾವ್, ಶಾಂತಾ, ಹಲೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಕೆ.ಪಿ ಬಾತಿಶ್ ತೆಕ್ಕಾರು ಮತ್ತು ಹಳೆ ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು. ಶಾಲಾ ಸಹಶಿಕ್ಷಕ ಹನೀಫ್ ಬಿ. ಸ್ವಾಗತಿಸಿ ವಂದಿಸಿದರು. ಶಾಲಾ ದೈಹಿಕ ಶಿಕ್ಷಕಿ ನಳಿನಾಕ್ಷಿ ಕಾರ್ಯಕ್ರಮವನ್ನು ನಿರೂಪಿಸಿದರು.

Also Read  ಮಂಗಳೂರು: ಬಸ್ ಸೀಟಿನಿಂದ ಬಿದ್ದು ಮಹಿಳೆ ಗಂಭೀರ..!

error: Content is protected !!
Scroll to Top