ತೆಕ್ಕಾರು: 74ನೇ ಸ್ವಾತಂತ್ರ್ಯ ದಿನಾಚರಣೆ

(ನ್ಯೂಸ್ ಕಡಬ) newskadaba.com ತೆಕ್ಕಾರು, ಆ. 15, 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಹಿದಾಯತುಲ್ ಇಸ್ಲಾಂ ಮದ್ರಸ ತೆಕ್ಕಾರಿನಲ್ಲಿ ಆಚರಿಸಲಾಯಿತು. ಧ್ವಜಾರೋಹಣ ನಡೆಸಿ ಸ್ವಾತಂತ್ರ್ಯ ಸಂದೇಶವನ್ನು ನೀಡಲಾಯಿತು.


ಕಾರ್ಯಕ್ರಮದಲ್ಲಿ ಬದ್ರಿಯಾ ಜುಮ್ಮಾ ಮಸ್ಜಿದ್ ತೆಕ್ಕಾರು ಅಧ್ಯಕ್ಷ M.T ಆದಂ ಬಾಜಾರ ಧ್ವಜಾರೋಹಣಗೈದರು. SYS ತೆಕ್ಕಾರು ಬ್ರಾಂಚ್ ಅಧ್ಯಕ್ಷ ಉಸ್ಮಾನ್ ಸಹದಿ ತೆಕ್ಕಾರು ಉದ್ಘಾಟಿಸಿ ಸ್ವಾತಂತ್ರ್ಯ ಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ BJM ಪ್ರಧಾನ ಕಾರ್ಯದರ್ಶಿ ಅತಾವುಲ್ಲ T.H ಕಾರ್ಯದರ್ಶಿ ನಝೀರ್ T.K, SSF ತೆಕ್ಕಾರು ಶಾಖಾ ಅಧ್ಯಕ್ಷ ನೌಫಲ್ T.H, ಉಸ್ಮಾನ್ ಮುಸ್ಲಿಯಾರ್ ಉಪಸ್ಥಿತರಿದ್ದರು.
ಹಿದಾಯತುಲ್ ಇಸ್ಲಾಂ ಮದ್ರಸಾ ತೆಕ್ಕಾರು ಪ್ರಿನ್ಸಿಪಾಲ್ ಇಸ್ಹಾಕ್ ಮದನಿ ಅಳಕೆ ಸ್ವಾಗತಿಸಿ ನಿರೂಪಿಸಿದರು.
ಕೆ.ಪಿ ಬಾತಿಶ್ ತೆಕ್ಕಾರು ವಂದಿಸಿದರು.

Also Read  ಅನಾರೋಗ್ಯ ಪೀಡಿತ ಜಯರಾಮ ಆಚಾರ್ಯರಿಗೆ ► ಬೇಕಾಗಿದೆ ದಾನಿಗಳ ಸಹಾಯ ಹಸ್ತ

error: Content is protected !!
Scroll to Top