(ನ್ಯೂಸ್ ಕಡಬ) newskadaba.com ಸುಳ್ಯ, ಆ.15, ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ವಠಾರದಲ್ಲಿ ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ ಹಾಗೂ ನುಸ್ರತುಲ್ ಇಸ್ಲಾಂ ಮದರಸ ಮ್ಯಾನೇಜ್‌ಮೆಂಟ್ ವತಿಯಿಂದ 74 ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.
ಬದ್ರಿಯಾ ಜಮ್ಮಾ ಮಸೀದಿ ಅಧ್ಯಕ್ಷರಾದ ಹಾಜಿ ಅಶ್ರಫ್ ಗುಂಡಿ ಧ್ವಜಾರೋಹಣ ಗೈದರು. ಮಸೀದಿ ಖತೀಬರಾದ ಅಲ್ ಹಾಜ್ ಇಸ್ಹಾಖ್ ಬಾಖವಿ ದುವಾ ನೇರವೇರಿಸಿ ಮಾತನಾಡಿ ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಡಿದ ವೀರ ಪುರುಷರನ್ನು ಸ್ಮರಿಸಬೇಕಾದದ್ದು ಪ್ರತಿ ಭಾರತೀಯ ಪ್ರಜೆಯ ಕರ್ತವ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ನುಸ್ರತುಲ್ ಮದರಸ ಮ್ಯಾನೇಜ್‌ಮೆಂಟ್ ಸಂಚಾಲಕ ಮಹಮ್ಮದ್ ಅಮೀರ್ ಕುಕ್ಕುಂಬಳ, ಅನ್ವಾರುಲ್ ಹುದಾ ಯಂಗ್ ಮನ್ಸ್ ಎಸೋಸಿಯೆಶನ್ ಅಧ್ಯಕ್ಷ ಅಬ್ದುಲ್ ಮಜೀದ್, ಜಮಾಅತ್ ಕಾರ್ಯದರ್ಶಿ ಕೆ.ಎಮ್. ಮೂಸಾನ್, ಜಮಾಅತ್ ಮಾಜಿ ಅಧ್ಯಕ್ಷ ಅಬ್ದುಲ್ ಖಾದರ್ ಪಠೇಲ್, ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೇಶನ್ ಕಾರ್ಯದರ್ಶಿ ಫಸೀಲು, ಸಂಸುದ್ದೀನ್ ಪೆಲ್ತಡ್ಕ, ಹನೀಫ್ ಎ.ಎ, ಜಾವೇದ್ ತೆಕ್ಕಿಲ್, ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ತಾಜುದ್ದೀನ್ ಎಸ್.ಅರಂತೋಡು, ಕಾರ್ಯದರ್ಶಿ ಜುಬೈರ್ ಎ, ಅಶೀಕ್ ಕುಕ್ಕುಂಬಳ ಮುಂತಾದವರು ಉಪಸ್ಥಿತರಿದ್ದರು. 74 ನೇ ಸ್ವಾತಂತ್ರ್ಯ ದಿನಾಚರಣೆ ನೆನಪಿಗೆ ಗಿಡವನ್ನು ನೆಡಲಾಯಿತು. ಕಾರ್ಯದರ್ಶಿ ಮೂಸಾನ್ ಸ್ವಾಗತಿಸಿ ಮಜೀದ್ ವಂದಿಸಿದರು.