ಕ್ರೀಡಾ  ಪ್ರೋತ್ಸಾಹಧನಕ್ಕೆ  ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು ಆ. 14, 2020-21ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಯುವ ಸಬಲೀಕರಣ   ಮತ್ತು  ಕ್ರೀಡಾ  ಇಲಾಖೆಯು  ಜಿಲ್ಲಾ ಪಂಚಾಯತ್ ಅನುದಾನದ ಅಡಿಯಲ್ಲಿ ಕ್ರೀಡಾ ಪ್ರೋತ್ಸಾಹಧನಕ್ಕೆ 30 ವರ್ಷಕ್ಕೆ ಒಳಪಟ್ಟ ದಕ್ಷಿಣ ಕನ್ನಡ ಜಿಲ್ಲೆಯ ಬಾಲಕ, ಬಾಲಕಿ ಹಾಗೂ ಪರುಷ, ಮಹಿಳಾ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನಿಸಿದೆ.

ಕ್ರೀಡಾಪಟುಗಳು 2019-20 ನೇ ಸಾಲಿನಲ್ಲಿ (2019 ಎಪ್ರಿಲ್ 1 ರಿಂದ 2020 ಮಾರ್ಚ್ 31 ವರೆಗೆ) ಸರಕಾರದಿಂದ, ಕ್ರೀಡಾ ಇಲಾಖೆಯಿಂದ, ಅಧಿಕೃತ ನೊಂದಾಯಿತ ಕ್ರೀಡಾ ಸಂಘ ಸಂಸ್ಥೆಗಳಿಂದ/ ವಿಶ್ವವಿದ್ಯಾನಿಲಯಗಳಿಂದ/ ಎಸ್‍ಜಿಎಫ್‍ಐನಿಂದ    ಸಂಘಟಿತಗೊಂಡಿರುವ  ಅಧಿಕೃತ ಕ್ರೀಡಾಕೂಟಗಳಲ್ಲಿ  ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ ಹಾಗೂ ರಾಜ್ಯ, ರಾಷ್ಟ್ರಮಟ್ಟದಲ್ಲಿ  ಪದಕ ವಿಜೇತರಾಗಿರಬೇಕು. ಅರ್ಜಿ ನಮೂನೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಕಚೇರಿಯಿಂದ ಪಡೆದು ಸೆಪ್ಟೆಂಬರ್ 15 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಪ್ರದೀಪ್ ಡಿ’ಸೋಜ, ಉಪನಿರ್ದೇಶಕರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದ.ಕ.ಜಿಲ್ಲೆ, ಮಂಗಳೂರು, ದೂರವಾಣಿ ಸಂಖ್ಯೆ 0824 2451264 ನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

Also Read  ➤ 2023ರಲ್ಲಿ ದೇಶದಲ್ಲಿ ಮೊದಲ ಹೈಡ್ರೋಜನ್ ರೈಲು ಸಂಚಾರ ➤ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

error: Content is protected !!
Scroll to Top