(ನ್ಯೂಸ್ ಕಡಬ) newskadaba.com ಮಂಗಳೂರು, ಆ. 14, ಕೋವಿಡ್-19 ಅವಧಿಯಲ್ಲಿ ಬೀಡಾಡಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಬೀಡಾಡಿ ಜಾನುವಾರುಗಳಿಗೆ ಮೇವು ಮತ್ತು ಪೌಷ್ಠಿಕ ಆಹಾರವನ್ನು ಒದಗಿಸಲು ಪಶುಪಾಲನಾ ಇಲಾಖೆಯಿಂದ ಅನುದಾನ ಬಿಡುಗಡೆಯಾಗಿರುತ್ತದೆ.
ಸಾರ್ವಜನಿಕರು, ಪ್ರಾಣಿ ಪ್ರಿಯರು, ಸಂಘ ಸಂಸ್ಥೆಗಳು ಬೀಡಾಡಿ ಜಾನುವಾರುಗಳಿಗೆ ಮೇವು, ಪೌಷ್ಠಿಕ ಆಹಾರ ನೀಡುತ್ತಿರುವ ಫೋಟೋ, ಮೇವು, ಪೌಷ್ಠಿಕ ಆಹಾರ ಖರೀದಿಸಿದ ರಶೀದಿ ಹಾಗೂ ಸ್ಥಳೀಯ ಪಶುವೈದ್ಯಾಧಿಕಾರಿಗಳ ಶಿಫಾರಸ್ಸು ಪತ್ರವನ್ನು ಉಪ ನಿರ್ದೇಶಕರು (ಆಡಳಿತ), ಪಶುಪಾಲನಾ ಇಲಾಖೆ, ದ.ಕ. ಮಂಗಳೂರು ಕಚೇರಿಗೆ ಸಲ್ಲಿಸಿದರೆ ಇಲಾಖೆಯಿಂದ ವೆಚ್ಚ ಭರಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು (ಆಡಳಿತ), ಪಶುಪಾಲನಾ ಇಲಾಖೆ, ದ.ಕ. ಮಂಗಳೂರು (0824-2492337) ಅಥವಾ ತಾಲ್ಲೂಕು ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಉಪನಿರ್ದೇಶಕರು (ಆಡಳಿತ) ಪಶುಪಾಲನಾ ಇಲಾಖೆ ದ.ಕ. ಇವರ ಪ್ರಕಟಣೆ ತಿಳಿಸಿದೆ.