ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ 727 ಕೋಟಿ ಸಾಲ ವಿತರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 14, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ 61ನೇ ವಾರ್ಷಿಕ ಮಹಾಸಭೆಯಲ್ಲಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ, ವ್ಯವಸ್ಥಾಪಕ ನಿರ್ದೇಶಕ, ಡಾ. ಏಕರೂಪ್ ಕೌರ್, ವೀಡಿಯೋ ಕಾನ್ಪರೆನ್ಸ್ ಮುಖಾಂತರ ಸಂಸ್ಥೆಯ ಶೇರುದಾರರನ್ನು ಉದ್ದೇಶಿಸಿ ಮಾತನಾಡಿದರು. 2020ನೇ ಮಾರ್ಚ್ 31 ಕ್ಕೆ ಅಂತ್ಯಗೊಂಡ ಸಂಸ್ಥೆಯ ಕಾರ್ಯಾಚರಣೆಯನ್ನು ಹಾಗೂ ಪರಿಶೋದಿಸಲ್ಪಟ್ಟ ಲೆಕ್ಕಪತ್ರಗಳ ಪ್ರಮುಖ ಅಂಶಗಳನ್ನು ಹಂಚಿಕೊಂಡರು.


2019-20ರ ಆರ್ಥಿಕ ವರ್ಷದಲ್ಲಿ ವಿವಿಧ ಸಾಲ ಯೋಜನೆಗಳ ಮೂಲಕ ರೂ. 667.81 ಕೋಟಿ ಸಾಲ ಮಂಜೂರು ಮಾಡಲಾಗಿದೆ. ರೂ. 727.90 ಕೋಟಿ ವಿತರಣೆ ಮಾಡಲಾಗಿದ್ದು ಪ್ರಸ್ತುತ 2019-20ರ ವರ್ಷದಲ್ಲಿ ಒಟ್ಟು ರೂ. 720.85 ಕೋಟಿ ವಸೂಲಾತಿ ಮಾಡಲಾಗಿದೆ. ಪ್ರಸ್ತುತ ವರ್ಷದಲ್ಲಿ ಸಂಸ್ಥೆಯು ರೂ. 44.92 ಕೋಟಿ ಲಾಭ ಗಳಿಸಿದೆ. ಶೇಕಡವಾರು ಅನುತ್ಪಾದಕ ನಿವ್ವಳ ಆಸ್ತಿಯು ಕಳೆದ ವರ್ಷದ ಶೇ 6.09 ರಿಂದ ಪ್ರಸ್ತುತ ವರ್ಷದಲ್ಲಿ ಶೇ 5.12 ಕ್ಕೆ ಇಳಿದಿರುತ್ತದೆ. ಸಂಸ್ಥೆಯು 31.3.2020 ರವರೆಗಿನ ಸಂಚಿತ ಮಂಜೂರಾತಿಯು 1,74,217 ಕೈಗಾರಿಕಾ ಘಟಕಗಳಿಗೆ ರೂ. 17,884.72 ಕೋಟಿ ಆಗಿರುತ್ತದೆ.
ಸಂಸ್ಥೆಯು ಈಗಾಗಲೇ 21,700 ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಉದ್ಯಮಿಗಳಿಗೆ 2000 ಕೋಟಿ ರೂ.ಗಳಿಗೂ ಅಧಿಕ ಸಾಲ ಮಂಜೂರಾತಿ ನೆರವನ್ನು ನೀಡಿರುತ್ತದೆ. ಸಂಸ್ಥೆಯು ಇಲ್ಲಿಯವರೆಗೆ 30,000 ಕ್ಕೂ ಹೆಚ್ಚಿನ ಮಹಿಳಾ ಉದ್ಯಮಿದಾರರಿಗೆ ರೂ. 4243.67 ಕೋಟಿ ಅವಧಿ ಸಾಲ ಮಂಜೂರಾತಿ ಮಾಡಿರುತ್ತದೆ. 41,000 ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಉದ್ಯಮಿಗಳಿಗೂ ಇದುವರೆಗೂ ರೂ. 1748.40 ಕೋಟಿ ಸಾಲ ಮಂಜೂರಾತಿ ನೆರವನ್ನು ಒದಗಿಸಿದೆ. ಮೊದಲ ಪೀಳಿಗೆ ಉದ್ಯಮಿದಾರರಿಗೆ ರೂ. 164.70 ಕೋಟಿ ಸಾಲ ಮಂಜೂರು ಒದಗಿಸಲಾಗಿದೆ.
ಕರ್ನಾಟಕ ರಾಜ್ಯಸರ್ಕಾರದ ಹಲವಾರು ಬಡ್ಡಿ ಸಹಾಯಧನ ಯೋಜನೆಯಡಿಯಲ್ಲಿ ಸಂಸ್ಥೆಯು ನೀಡಿರುವ ನೆರವಿನ ವಿವರಣೆ ಕೆಳಕಂಡಂತಿದೆ.
ಕರ್ನಾಟಕ ಸರ್ಕಾರದ ಬಡ್ಡಿ ಸಹಾಯ ಧನ ಯೋಜನೆಗಳು ಹಾಗೂ ನೆರವಿನ ವಿತರಣೆ: ಮಹಿಳಾ ಉದ್ಯಮಿದಾರರು 2019-20 ನೆರವಿನ ವಿತರಣೆ ಸಂಖ್ಯೆ – 165, ಮಂಜೂರಾತಿ – ರೂ. 145.15 ಕೋಟಿ, 2020 ರ ಜುಲೈ 31 ರವರೆಗೆ ಸಂಚಿತ ನೆರವು ಸಂಖ್ಯೆ – 1389, ಮಂಜೂರಾತಿ – ರೂ. 863.35 ಕೋಟಿ.
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಉದ್ಯಮಿದಾರರು 2019-20 ನೆರವಿನ ವಿತರಣೆ ಸಂಖ್ಯೆ – 221, ಮಂಜೂರಾತಿ – ರೂ. 147.92 ಕೋಟಿ, 2020 ರ ಜುಲೈ 31 ರವರೆಗೆ ಸಂಚಿತ ನೆರವು ಸಂಖ್ಯೆ – 3218, ಮಂಜೂರಾತಿ – ರೂ. 1775.09 ಕೋಟಿ.
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಉದ್ಯಮಿಗಳ ಜವಳಿ / ಕೈಮಗ್ಗ ಘಟಕಗಳಿಗೆ 2019-20 ನೆರವಿನ ವಿತರಣೆ ಸಂಖ್ಯೆ – 20, ಮಂಜೂರಾತಿ – ರೂ. 44.17 ಕೋಟಿ, 2020 ರ ಜುಲೈ 31 ರವರೆಗೆ ಸಂಚಿತ ನೆರವು ಸಂಖ್ಯೆ – 55, ಮಂಜೂರಾತಿ – ರೂ. 124.70 ಕೋಟಿ.
ಮೊದಲ ಪೀಳಿಗೆ ಉದ್ಯಮಿದಾರರು 2020 ರ ಜುಲೈ 31 ರವರೆಗೆ ಸಂಚಿತ ನೆರವು ಸಂಖ್ಯೆ – 287, ಮಂಜೂರಾತಿ – ರೂ. 164.79 ಕೋಟಿ.
ಎಲ್ಲಾ ವರ್ಗದ ಉದ್ಯಮಿದಾರರಿಗೆ ಬಡ್ಡಿ ಸಹಾಯಧನ ಯೋಜನೆ 2019-20 ನೆರವಿನ ವಿತರಣೆ ಸಂಖ್ಯೆ – 26/2, ಮಂಜೂರಾತಿ – ರೂ. 262.85 ಕೋಟಿ, 2020 ರ ಜುಲೈ 31 ರವರೆಗೆ ಸಂಚಿತ ನೆರವು ಸಂಖ್ಯೆ – 510, ಮಂಜೂರಾತಿ – ರೂ. 565.62 ಕೋಟಿ.
ಪರಿಶಿಷ್ಟಜಾತಿ/ಪರಿಶಿಷ್ಟ ಪಂಗಡಗಳ ಉದ್ಯಮಿಗಳಿಗೆ ಪೂರಕ ಭದ್ರತಾ ಖಾತರಿ ಯೋಜನೆ 2019-20 ನೆರವಿನ ವಿತರಣೆ ಸಂಖ್ಯೆ – 33, ಮಂಜೂರಾತಿ – ರೂ. 34.15 ಕೋಟಿ, 2020 ರ ಜುಲೈ 31 ರವರೆಗೆ ಸಂಚಿತ ನೆರವು ಸಂಖ್ಯೆ – 110, ಮಂಜೂರಾತಿ – ರೂ. 129.78 ಕೋಟಿ.
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ರಾಜ್ಯ ಸರ್ಕಾರದ ನೆರವು: ಸಂಸ್ಥೆಯು ಕೈಗೊಂಡಿರುವ ಹಲವಾರು ಉಪಕ್ರಮಗಳು ಹಾಗೂ ಪ್ರಮುಖ ಯೋಜನೆಗಳಾದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಉದ್ಯಮಿಗಳಿಗೆ, ಮಹಿಳಾ ಉದ್ಯಮಿಗಳಿಗೆ ಹಾಗೂ ಎಲ್ಲಾ ವರ್ಗದ ಉದ್ಯಮಿಗಳಿಗೆ ಲಭ್ಯವಿರುವ ಶೇ 4ರ ನಿವ್ವಳ ಬಡ್ಡಿದರದಲ್ಲಿ ಆರ್ಥಿಕ ಸಹಾಯ ಯೋಜನೆಗಳ ಯಶಸ್ವಿ ಅನುಷ್ಠಾನದ ಪ್ರತಿಫಲವಾಗಿ ಸಂಸ್ಥೆಯು ಮೇಲಿನ ಸಾಧನೆಯನ್ನು ಗಳಿಸಲು ಸಾಧ್ಯವಾಗಿದೆ. ಕರ್ನಾಟಕ ಸರ್ಕಾರದ ವತಿಯಿಂದ ಉಳಿದ ಬಡ್ಡಿದರವು ಸಹಾಯಧನದ ರೂಪದಲ್ಲಿ ಪಾವತಿಯಾಗುತ್ತದೆ.
ಪ್ರಸ್ತುತ ಹಣಕಾಸು ವರ್ಷದಲ್ಲಿ ಕರ್ನಾಟಕ ಸರ್ಕಾರವು ಸಂಸ್ಥೆಗೆ ರೂ. 100 ಕೋಟಿ ಈಕ್ವಿಟಿ ಬಂಡವಾಳವನ್ನು ಹಾಗೂ ರೂ. 71.50 ಕೋಟಿ ಬಡ್ಡಿ ಸಹಾಯಧನದ ನೆರವನ್ನು ಮೇಲಿನ ಯೋಜನೆಗಳಡಿಯಲ್ಲಿ ಒದಗಿಸಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಉದ್ಯಮಿಗಳು ಸ್ಥಾಪಿಸುವ ಜವಳಿ ಮತ್ತು ಕೈಮಗ್ಗ ಘಟಕಗಳಿಗೆ ವಿಶೇಷ ಹಣಕಾಸಿನ ಯೋಜನೆಯಡಿಯಲ್ಲಿ ಕರ್ನಾಟಕ ಸರ್ಕಾರವು ರೂ. 20.12 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಉದ್ಯಮಿದಾರರಿಗೆ ಬಂಡವಾಳವಾಗಿ ರೂ. 27.02 ಕೋಟಿ ಸರಳಬೀಜ ಧನವನ್ನು ಕರ್ನಾಟಕ ಸರ್ಕಾರವು ನೀಡಿರುತ್ತದೆ.
2020-21 ನೇ ಸಾಲಿನ ಗುರಿಗಳು: ಸದರಿ 2020-21ರ ಹಣಕಾಸು ವರ್ಷವನ್ನು “ಕೋವಿಡ್-19 ರ ಸವಾಲುಗಳ ವರ್ಷ” ವೆಂದು ಪರಿಗಣಿಸಲಾಗಿದೆ. ರಾಜ್ಯದ ಆರ್ಥಿಕತೆಯಲ್ಲಾದ ಚಂಚಲತೆಯಿಂದಾಗಿ ಪ್ರಸ್ತುತ ವರ್ಷದಲ್ಲಿ ಸಂಸ್ಥೆಯೂ ಸಹಾ ಮಿಶ್ರ ಬೆಳವಣಿಗೆಯನ್ನೇ ನಿರೀಕ್ಷಿಸಲಿದೆ. ಕೊರೊನಾ ಏಟಿನಿಂದ ಮಧ್ಯಮ, ಸಣ್ಣ ಹಾಗೂ ಸೂಕ್ಷ್ಮ ಘಟಕಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಪರಿಹಾರ ಹಾಗೂ ರಿಯಾಯಿತಿಗಳನ್ನು ನೀಡುವ ದಿಕ್ಕಿನಲ್ಲಿ ಕಾರ್ಯಗತವಾಗಿವೆ.
2020-21ರ ಆರ್ಥಿಕ ವರ್ಷದಲ್ಲಿ ಸಂಸ್ಥೆಯು ತಲಾ ರೂ. 600 ಕೋಟಿಗಳ ಮಂಜೂರಾತಿ ಗುರಿಯನ್ನು ಹೊಂದಿದ್ದು ಕರ್ನಾಟಕ ಸರ್ಕಾರದ ಬಡ್ಡಿ ಸಹಾಯಧನ ಯೋಜನೆಗಳ ಯಶಸ್ವಿ ಅನುಷ್ಠಾನದೊಂದಿಗೆ ಸಮಾಜದ ವಿವಿಧ ವರ್ಗಗಳಿಂದ ಸ್ಥಾಪಿಸಲ್ಪಡುವ ಎಂ.ಎಸ್.ಎಂ.ಇ ಗಳಿಗೆ ನೆರವು ನೀಡುವ ಕಡೆಗೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಲಿದೆ. ಎಂ.ಎಸ್.ಎಂ.ಇ ಗಳ ಪರಿಷ್ಕøತ ನಿರೂಪಣೆಯು 2020ನೇ ಜುಲೈ 01 ರಿಂದ ಜಾರಿಗೊಳ್ಳಲಿದ್ದು ಉತ್ಪಾದಕ ಹಾಗೂ ಸೇವಾ ವಲಯಗಳಿಂದ ಸ್ಥಾಪಿಸಲ್ಪಡುವ ಘಟಕಗಳಿಗೆ ಕರ್ನಾಟಕ ರಾಜ್ಯ ಸರ್ಕಾರದ ಸಬ್‍ವೆನ್ಷನ್ ಯೋಜನೆಯನ್ನು 2020-21 ರಿಂದ ಸಂಸ್ಥೆಯಲ್ಲಿ ಪುನರ್ ಪರಿಚಯಿಸುತ್ತಿರುವುದು ಉದ್ಯಮಿಗಳಿಗೆ ವರದಾನವಾಗಲಿದೆ. ಅಲ್ಲದೆ ಅನುತ್ಪಾದಕ ಆಸ್ತಿಗಳನ್ನು ಮತ್ತಷ್ಟು ಕಡಿಮೆಗೊಳಿಸಲು ಸಂಸ್ಥೆಯು ಹೆಚ್ಚಿನ ಒತ್ತು ನೀಡಲಿದೆ ಎಂದು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ

error: Content is protected !!
Scroll to Top