ಟಾಪರ್ ಅನುಷ್ ಎ. ಎಲ್ ಗೆ ಸನ್ಮಾನ ➤ ಸುಬ್ರಹ್ಮಣ್ಯ ಯೇನೆಕಲ್ಲು ಒಕ್ಕೂಟ ವತಿಯಿಂದ ಸನ್ಮಾನ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಆ,14:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಸುಬ್ರಹ್ಮಣ್ಯ ಯೇನೆಕಲ್ಲು ಒಕ್ಕೂಟದ ವತಿಯಿಂದ ಎಸ್. ಎಸ್. ಎಲ್. ಸಿ ಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿ ಉತೀರ್ಣಗೈದು ಸಾಧನೆಗೈದ ಗ್ರಾಮೀಣ ಪ್ರತಿಭೆ ಅನುಷ್ ಎ ಎಲ್ ರವರಿಗೆ ಅಭಿನಂದಾನ ಕಾರ್ಯಕ್ರಮ ಏರ್ಪಡಿಸಿ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಭಾಭವನದಲ್ಲಿ, ಇಂದು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.

 

 

ವಲಯ ಮೇಲ್ವಿಚಾರಕಾರದ ಸೀತಾರಾಮ, ಒಕ್ಕೂಟದ ಅಧ್ಯಕ್ಷರಾದ ತೇಜುಕುಮಾರ್, ಮತ್ತು ಸುರೇಶ್ ಕುಮಾರ್ ಉಜಿರಡ್ಕ ರವರು ಫಲಪುಷ್ಪವನ್ನು ನೀಡಿ ಅಭಿನಂದಿಸಿ ಗೌರವಿಸಿದರು. ಇನ್ನೂ ಈ ಕಾರ್ಯಕ್ರಮದಲ್ಲಿ ಅನುಷ್ ರವರ ತಂದೆ ಲೋಕೆಶ್ ಎಣ್ಣೆ ಮಜಲು, ಸೇರಿದಂತೆ ರತ್ನಾಕರ ಎಸ್, ಲೋಕೇಶ್ ಬಿ ಎನ್, ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ರಘು ಬಿ ಎನ್, ಲೋಕೇಶ್ ಯೇನೆಕಲ್ಲು, ಆನಂದ ಕಲ್ಲಪಣೆ, ರಾಮಚಂದ್ರ ಯೇನೆಕಲ್ಲು, ಒಕ್ಕೂಟದ ಪದಾಧಿಕಾರಿಗಳಾದ ಗುರುಪ್ರಸಾದ್ ದೇವರಗದ್ದೆ, ಶೈಲಜಾ, ಜಯಶ್ರೀ, ಲಲಿತಾ, ಪವಿತ್ರಾ, ಮಂಜುಳಾ ರರವರು ಉಪಸ್ಥಿತರಿದ್ದು, ಕಾರ್ಯಕ್ರಮದ ನಿರೂಪಣೆಯನ್ನು ಸೇವಾ ಪ್ರತಿನಿಧಿ ಹರಿಣಾಕ್ಷಿಯವರು ನೇರವೇರಿಸಿ, ಧನ್ಯವಾದವನ್ನು ಯೇನೆಕಲ್ಲು ಸೇವಾಪ್ರತಿನಿಧಿ ತಾರಾರವರು ನೆರವೇರಿಸಿದರು.

Also Read  ನಾಳೆ (ಅ.05 ರಂದು) ಆಲಂಕಾರಿನಲ್ಲಿ ► ಎಸ್ಸಿ ಮೋರ್ಚಾದ "ಸಮರ್ಥನಾ ಸಮಾವೇಶ''

 

 

error: Content is protected !!
Scroll to Top