ವಿವಿಧ ನಿಗಮಗಳ ಸೌಲಭ್ಯ ➤ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ

(ನ್ಯೂಸ್ ಕಡಬ) newskadaba.com  ಮಂಗಳೂರು, ಆ. 13, ಮಡಿವಾಳ, ಸವಿತಾ ಸಮಾಜ, ಉಪ್ಪಾರ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಆಭಿವೃದ್ದಿ ನಿಗಮಗಳ 2020-21 ನೇ ಸಾಲಿಗೆ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಅರ್ಜಿ ಸ್ವೀಕರಿಸುವ ಕೊನೆಯ ದಿನಾಂಕವನ್ನು ನಿಗಮ ವಿಸ್ತರಿಸಿರುತ್ತದೆ.


ಅರ್ಜಿ ಸಲ್ಲಿಸಲು ವಿಸ್ತರಿಸಿದ ಕೊನೆಯ ದಿನಾಂಕಗಳು ಇಂತಿವೆ: ಮಡಿವಾಳ ಅಭಿವೃದ್ಧಿ ನಿಗಮ – ಅರ್ಜಿ ಸಲ್ಲಿಸಲು ಕೊನೆಯ ದಿನ ಆಗಸ್ಟ್ 31., ಸವಿತಾ ಸಮಾಜ ನಿಗಮ – ಅರ್ಜಿ ಸಲ್ಲಿಸಲು ಕೊನೆಯ ದಿನ ಸಪ್ಟೆಂಬರ್ 3., ಉಪ್ಪಾರ ನಿಗಮ – ಅರ್ಜಿ ಸಲ್ಲಿಸಲು ಕೊನೆಯ ದಿನ ಸಪ್ಟೆಂಬರ್ 5., ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ – ಅರ್ಜಿ ಸಲ್ಲಿಸಲು ಕೊನೆಯ ದಿನ ಸಪ್ಟೆಂಬರ್ 1. ಆಯಾ ನಿಗಮಗಳ ಮುಂದೆ ನಮೂದಿಸಿರುವ ದಿನಾಂಕಗಳು ಅರ್ಜಿ ಸ್ವೀಕರಿಸಲು ಕೊನೆಯ ದಿನವಾಗಿರುತ್ತದೆ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರ ಪ್ರಕಟಣೆ ತಿಳಿಸಿದೆ.

Also Read  ಫೆ.9ರಿಂದ 18ರವರೆಗೆ ಭಗವಾನ್ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕ

error: Content is protected !!
Scroll to Top