ಡಿ.ಎಲ್.ಇಡಿ ಮತ್ತು ಡಿ.ಪಿ.ಇಡಿ ಕೋರ್ಸುಗಳಿಗೆ ದಾಖಲಾತಿ ಆರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.13, ಮಂಗಳೂರು ಆ. 13, 2020-21ನೇ ಸಾಲಿನಲ್ಲಿ ಡಿ.ಎಲ್.ಇಡಿ ಮತ್ತು ಡಿ.ಪಿ.ಇಡಿ ಕೋರ್ಸುಗಳ ವ್ಯಾಸಂಗಕ್ಕಾಗಿ ರಾಜ್ಯದ ಸರ್ಕಾರಿ ಮತ್ತು ಮಾನ್ಯತೆ ಪಡೆದ ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಕ ತರಬೇತಿ ಸಂಸ್ಥೆಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳ ದಾಖಲಾತಿಗಾಗಿ ಅರ್ಜಿ ಆಹ್ವಾನಿಸಲಾಗಿರುತ್ತದೆ.

ಅರ್ಹ ಅಭ್ಯರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್‍ಸೈಟ್ www.schooleducation.kar.nic.inನಲ್ಲಿರುವ ದಾಖಲಾತಿ ಅರ್ಜಿಯನ್ನು ಮುದ್ರಿಸಿಕೊಂಡು ಭರ್ತಿ ಮಾಡಬೇಕು. ಭರ್ತಿ ಮಾಡಿದ ಅರ್ಜಿಯನ್ನು ಸಂಬಂಧಿಸಿದ ಡಯಟ್‍ಗೆ ಸಲ್ಲಿಸಬೇಕು. ದಾಖಲಾತಿ ಅರ್ಜಿಗಳನ್ನು ಆಗಸ್ಟ್ 5 ರಿಂದ 30 ರಂದು ಸಂಜೆ 5.30 ಗಂಟೆಯವರೆಗೆ ಸಲ್ಲಿಸಬಹುದಾಗಿದ್ದು, ಅರ್ಜಿಯನ್ನು ಸಲ್ಲಿಸುವ ವಿಧಾನ, ಅರ್ಹತೆ ಮತ್ತು ಮೀಸಲಾತಿ ವಿವರಗಳು ಹಾಗೂ ಇತರೆ ಸೂಚನೆಗಳನ್ನು ವೆಬ್‍ಸೈಟ್ www.schooleducation.kar.nic.in ನಲ್ಲಿ ಪ್ರಕಟಿಸಲಾಗಿದೆ. ವೆಬ್‍ಸೈಟ್‍ನಲ್ಲಿನ ಮಾಹಿತಿಗಳನ್ನು ಕಡ್ಡಾಯವಾಗಿ ಓದಿಕೊಂಡು ಅರ್ಜಿಗಳನ್ನು ಕ್ರಮವಾಗಿ ಭರ್ತಿ ಮಾಡಿ ಪೂರಕ ದಾಖಲೆಗಳೊಂದಿಗೆ ವ್ಯವಸ್ಥಾಪಕ ಕೇಂದ್ರವಾದ ಡಯಟ್, ಮಂಗಳೂರು ಕಚೇರಿಗೆ ಆಗಸ್ಟ್ 30 ರಂದು ಸಂಜೆ 5.30 ಗಂಟೆಯವರೆಗೆ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಶೈಕ್ಷಣಿಕ ವಿದ್ಯಾರ್ಹತೆ:-  ಡಿ.ಎಲ್.ಇಡಿ ಕೋರ್ಸ್: ದ್ವಿತೀಯ ಪಿ.ಯು.ಸಿ./12ನೇ ತರಗತಿಯ ಪರೀಕ್ಷೆಯಲ್ಲಿ ಎಸ್.ಸಿ/ಎಸ್.ಟಿ./ಪ್ರವರ್ಗ-1/ಅಂಗವಿಕಲ ಅಭ್ಯರ್ಥಿಗಳು ಕನಿಷ್ಟ 45% ಮತ್ತು ಇತರೆ ಸಾಮಾನ್ಯ ಅಭ್ಯರ್ಥಿಗಳು ಕನಿಷ್ಟ 50% ಅಂಕಗಳನ್ನು ಪಡೆದಿರಬೇಕು. ಡಿ.ಪಿ.ಇಡಿ. ಕೋರ್ಸ್: ಅಭ್ಯರ್ಥಿಗಳು ದ್ವಿತೀಯ ಪಿ.ಯು.ಸಿ./12ನೇ ತರಗತಿಯ ಪರೀಕ್ಷೆಯಲ್ಲಿ ಕನಿಷ್ಟ 50% ಅಂಕಗಳನ್ನು ಹಾಗೂ ಶಿಕ್ಷಣ ಇಲಾಖೆ ಅಥವಾ ವಿಶ್ವವಿದ್ಯಾಲಯ ಅಥವಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಆಯೋಜಿಸಿರುವ ರಾಜ್ಯ ಅಥವಾ ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿ ಪ್ರಮಾಣ ಪತ್ರ ಹೊಂದಿರುವ ಅಭ್ಯರ್ಥಿಗಳು ಕನಿಷ್ಟ 45% ಅಂಕಗಳನ್ನು ಪಡೆದಿರಬೇಕು.

Also Read  ಉದ್ಯೋಗಾರ್ಥಿಗಳಿಗೆ ಬಾಳಿನ ಬೆಳಕಾಗುವ ವೃತ್ತಿಶಿಕ್ಷಣಕ್ಕಾಗಿ ➤ ಬೆಥನಿ ವಿದ್ಯಾಸಂಸ್ಥೆ ನೆಲ್ಯಾಡಿ

ಅಭ್ಯರ್ಥಿಗಳಿಗೆ ಮುಖ್ಯ ಸೂಚನೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಸರ್ಕಾರಿ ಮಹಿಳಾ ಶಿಕ್ಷಕಿಯರ ತರಬೇತಿ ಸಂಸ್ಥೆ, ಬಲ್ಮಠ, ಮಂಗಳೂರು ಸಂಸ್ಥೆಯನ್ನು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಕೊಡಿಯಾಲ್‍ಬೈಲು, ಮಂಗಳೂರು, ದ.ಕ. ಇಲ್ಲಿಗೆ ವಿಲೀನಗೊಳಿಸಲಾಗಿದ್ದು, ಅರ್ಜಿಯನ್ನು ಸಲ್ಲಿಸುವ ವೇಳೆ ಅಭ್ಯರ್ಥಿಗಳು ಸರ್ಕಾರಿ ಮಹಿಳಾ ಶಿಕ್ಷಕಿಯರ ತರಬೇತಿ ಸಂಸ್ಥೆ, ಬಲ್ಮಠ, ಮಂಗಳೂರು ಸಂಸ್ಥೆಯ ಬದಲಾಗಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್), ಕೊಡಿಯಾಲ್‍ಬೈಲು, ಮಂಗಳೂರು, ದ.ಕ ಸಂಸ್ಥೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್), ಕೊಡಿಯಾಲ್‍ಬೈಲು, ಮಂಗಳೂರು, ದ.ಕ ಸಂಸ್ಥೆಯ ಜಿಲ್ಲೆಯಲ್ಲಿನ ಏಕ ಮಾತ್ರ ಸರ್ಕಾರಿ ಡಿ.ಎಲ್.ಇಡಿ ಸಂಸ್ಥೆಯಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ಕೇಂದ್ರೀಕೃತ ದಾಖಲಾತಿ ಘಟಕದ ದೂರವಾಣಿ  ಸಂಖ್ಯೆ:080-22483140 ಮತ್ತು 080-22483145 ಹಾಗೂ ವ್ಯವಸ್ಥಾಪಕ ಕೇಂದ್ರವಾದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್), ಜೈಲ್‍ರಸ್ತೆ, ಕೊಡಿಯಾಲ್‍ಬೈಲು, ಮಂಗಳೂರು ಇವರ ಕಚೇರಿ ಅಥವಾ ದೂರವಾಣಿ ಸಂಖ್ಯೆ: 0824-2493052ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Also Read  ಸುಳ್ಯ: ಕ್ಯಾಂಟಿನ್ ನ ಪಾತ್ರೆಗಳನ್ನು ಬಾವಿಗೆಸೆದು, ಮಗನಿಗೆ ಕತ್ತಿಯಿಂದ ಕಡಿದ ತಂದೆ..!

error: Content is protected !!
Scroll to Top