(ನ್ಯೂಸ್ ಕಡಬ) newskadaba.com ಮಂಗಳೂರು ಆ. 13, 2020ನೇ ಆಗಸ್ಟ್ 12 ರ “ವಿಶ್ವ ಆನೆ ದಿನ” ಪ್ರಯುಕ್ತ ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವೃತ್ತದ ವತಿಯಿಂದ ಪ್ರಕೃತಿಯಲ್ಲಿ ಆನೆಯ ಪ್ರಾಮುಖ್ಯತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಬಗ್ಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ 15 ವರ್ಷದ ಒಳಗಿನ ಮಕ್ಕಳಿಂದ ಆನೆಯ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಿದ್ದು, ಪ್ರವೇಶಾರ್ಥಿಗಳನ್ನು ಸಾಮಾಜಿಕ ಜಾಲತಾಣದ ಮುಖಾಂತರ ಆಹ್ವಾನಿಸಲಾಗಿತ್ತು. ಸ್ಪರ್ಧೆಗೆ ಒಟ್ಟು 1496 ಚಿತ್ರಗಳು ಬಂದಿದ್ದು, ಅವುಗಳಲ್ಲಿ ಅಂತಿಮವಾಗಿ ಎರಡು ವರ್ಗಗಳಲ್ಲಿ ಆಯ್ಕೆ ಮಾಡಿ ಬಹುಮಾನವನ್ನು ನೀಡಲಾಯಿತು.
ಒಂದನೇ ವರ್ಗದಲ್ಲಿ 10 ವರ್ಷದ ಒಳಗಿನವರಾದ – ಸಾತ್ವಿಕ್ ಕೆ. ಆಚಾರ್ಯ ಕಾರ್ಕಳ ಪ್ರಥಮ, ದ್ವಿತೀಯ -ಧೃತಿ ಎಸ್., ಉಡುಪಿ, ತೃತೀಯ -ನಿಲಿಷ್ಕಾ ಕೆ., ಪುತ್ತೂರು. ಎರಡನೇ ವರ್ಗದಲ್ಲಿ 15 ವರ್ಷದ ಒಳಗಿನವರು: ಪ್ರಥಮ -ಕೆ. ಪ್ರತಿಷ್ಠಾ ಶೇಟ್, ಉಡುಪಿ, ದ್ವಿತೀಯ -ಶರಣ್ಯ ಭಟ್, ಬ್ರಹ್ಮಾವರ, ತೃತೀಯ -ಮೋಕ್ಷಿತ್ ಸುರೇಶ್, ಮಂಗಳೂರು ಮತ್ತು ಹಾಮಿದ ವಫಾ ಯು., ಪುತ್ತೂರು ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳು ಮತ್ತು ಸಹಕರಿಸಿದ ಪೋಷಕರಿಗೆ ಮಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಅಭಿನಂದಿಸಿರುತ್ತಾರೆ.